Bidar : ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಕ್ಕೆ ನನ್ನನ್ನು ಪಾರ್ಲಿಮೆಂಟ್ ನಿಂದ ಅನರ್ಹ ಮಾಡಿದರು. ಮಾತನಾಡಲು ಮೈಕ್ ನೀಡಲಿಲ್ಲ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾಲ್ಕಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ 40% ಕೊಡಬೇಕು. ಇಲ್ಲಾವಾದರೆ ನಿಮ್ಮ ಕೆಲಸಗಳು ಆಗಲ್ಲ. ಮೋದಿ ಸುಳ್ಳು ಹೇಳಿದಂತೆ ನಾವು ಸುಳ್ಳು ಹೇಳಲ್ಲ, ಯಾಕೆಂದರೆ 15 ಲಕ್ಷ ರೂ. ಹಾಕುತ್ತೇನೆ ಎಂದ ಮೋದಿ ಹಾಕಿದ್ರಾ? ಎಂದು ಪ್ರಶ್ನಿಸಿದ ಅವರು, ಇದು 40% ಸರ್ಕಾರ. ಹೀಗಾಗೀ ಈ ಬಾರಿ ಬಿಜೆಪಿಗೆ 40 ಸೀಟು ಮಾತ್ರ ಕೊಡಿ. ಒಬಿಸಿ ಸರ್ವೆ ಬಹಿರಂಗ ಮಾಡಿ, ರಿಸರ್ವೇಶನ್‌ನಲ್ಲಿ 50% ಕ್ಯಾಪ್ ಮೀಸಲು ತೆಗೆಯಿರಿ, ದಲಿತ ಮತ್ತು ಒಬಿಸಿ ಅವರ ಮೀಸಲಾತಿ ಅವರಿಗೆ ಕೊಡಿ. ಆದರೆ ಮೋದಿ ಈ ಯಾವ ಕೆಲಸ ಮಾಡಲ್ಲ. ಅವರಿಗೆ ಒಬಿಸಿ ಮತ ಬೇಕು ಅಷ್ಟೇ ಎಂದು ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಹಿರಿಯ ನಾಯಕ ವೇಣುಗೋಪಾಲ್ ರಾವ್, ರಾಜ್ಯ ಉಸ್ತುವಾರಿ ಸುರ್ಜೆವಾಲ, ಶಾಸಕರು ಸೇರಿದಂತೆ ಹಲವರು ಇದ್ದರು.