ನಟಿ ಇಲಿಯಾನಾ ಡಿಕ್ರೂಜ್ (Ileana D’cruz) ಮದುವೆಗೂ ಮುನ್ನ ಗರ್ಭಿಣಿಯಾಗಿದ್ದಾರೆ ಎನ್ನಲಾಗಿದ್ದು, ಸದ್ಯದಲ್ಲಿಯೇ ಅವರು ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಸುದ್ದಿ ಹೊರ ಬೀಳುವುದೇ ತಡ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಅವರ ಪಾರ್ಟರ್ ಯಾರು ಎಂಬುವುದನ್ನು ಅವರು ಬಹಿರಂಗ ಪಡಿಸಿಲ್ಲ. ಅವರ ಈ ನಿರ್ಧಾರದಿಂದ ಫ್ಯಾನ್ಸ್ ಅಚ್ಚರಿಪಟ್ಟಿದ್ದಾರೆ. ತಾವು ಪ್ರೆಗ್ನೆಂಟ್ ಎಂಬುದನ್ನು ಇಲಿಯಾನಾ ಡಿಕ್ರೂಜ್ ಅವರು ನೇರವಾಗಿ ಹೇಳಿಲ್ಲ. ಇನ್ಸ್ಟಾಗ್ರಾಮ್ನಲ್ಲಿ ಪರೋಕ್ಷವಾಗಿ ಪೋಸ್ಟ್ ಮಾಡಿದ್ದಾರೆ. ಕಮಿಂಗ್ ಸೂನ್.. ನಿನ್ನನ್ನು ನೋಡಲು ಕಾದಿದ್ದೇನೆ ಲಿಟ್ಲ್ ಡಾರ್ಲಿಂಗ್’ ಎಂದು ಇಲಿಯಾನಾ ಡಿಕ್ರೂಜ್ ಅವರು ಬರೆದುಕೊಂಡಿದ್ದಾರೆ.

ಅದರ ಜೊತೆ ಮಗುವಿನ ಬಟ್ಟೆ ಮತ್ತು ಅಮ್ಮ (Mama) ಎಂಬ ಡಾಲರ್ ಇರುವ ಸರದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಇಲಿಯಾನಾ ಅವರ ತಾಯಿ ಸಮೀರಾ ಡಿಕ್ರೂಜ್ ಕೂಡ ಕಮೆಂಟ್ ಮಾಡಿದ್ದಾರೆ. ‘ನನ್ನ ಮೊಮ್ಮಗುವಿಗೆ ಶೀಘ್ರದಲ್ಲಿಯೇ ಪ್ರಪಂಚಕ್ಕೆ ಸ್ವಾಗತ ಕೋರುವೆ’ ಎಂದು ಅವರು ಬರೆದುಕೊಂಡಿದ್ದಾರೆ. ಶಿಬಾನಿ ದಾಂಡೇಕರ್, ನಿಶಾ ಅಗರ್ವಾಲ್ ಮುಂತಾದ ಸೆಲೆಬ್ರಿಟಿಗಳು ಕೂಡ ಕಮೆಂಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.

ಇಲಿಯಾನಾ ಡಿಕ್ರೂಜ್ ಅವರು ಈ ಹಿಂದೆ ಆಸ್ಟ್ರೇಲಿಯಾದ ಫೋಟೋಗ್ರಾಫರ್ ಆ್ಯಂಡ್ರ್ಯೂ ನೀಬೋನ್ ಜೊತೆ ಡೇಟಿಂಗ್ ನಡೆಸುತ್ತಿದ್ದರು. ನಂತರ ಈ ಜೋಡಿ ಬ್ರೇಕಪ್ ಮಾಡಿಕೊಂಡಿತು ಎಂದು ವರದಿ ಆಗಿತ್ತು. ಇತ್ತೀಚೆಗೆ ಇಲಿಯಾನಾ ಡಿಕ್ರೂಜ್ ಅವರು ನಟಿ ಕತ್ರಿನಾ ಕೈಫ್ ಸಹೋದರ ಸೆಬ್ಬಾಸ್ಟಿಯನ್ ಲೊರಾನ್ ಮಿಶಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೂಡ ಗಾಸಿಪ್ ಹಬ್ಬಿತ್ತು. ಸದ್ಯ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುವುದು ಬಹಿರಂಗವಾಗಿಲ್ಲ.