Gadag: ಗದಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಲು ಎಸಿ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ ಅನಿಲ್ ಮೆಣಸಿನಕಾಯಿ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು.ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಮೆಣಸಿನಕಾಯಿ, ಗಂಭೀರ ಆರೋಪ ಮಾಡಿದ್ದಾರೆ.

ಶಾಸಕ ಎಚ್.ಕೆ ಪಾಟೀಲ್(H. K. Patil) ಕೂಡ ಒಳಗೆ ನನಗೆ ಶುಭ ಹಾರೈಸಿದ್ದರು. ನಾಮಪತ್ರ ಸಲ್ಲಿಸಿ ವಾಪಸ್ ಬರುವಾಗ ಕಾಂಗ್ರೆಸ್ ಮೆರವಣಿಗೆ ಬಂತು. ನನ್ನ ಕಾರಿನ ಮುಂದೆ ಘೋಷಣೆ ಕೂಗಿದರು. ನಾನು ಗ್ಲಾಸ್ ಇಳಿಸಿ ಯಾಕೆ ಎಂದು ಪ್ರಶ್ನೆ ಮಾಡಿದೆ, ನನ್ನ ಕಾರ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಜ್ಜಿಗೆ ಕುಡಿದು ಉಗುಳಿದರು. ಆಗ ಯಾರೋ ನನ್ನ ಕಾರಿನ ಮೇಲೆ ಚಪ್ಪಲಿ, ಕಲ್ಲು ಎಸೆದರು. ಕೂಡಲೇ ನಾನು ಕಾರನಿಂದ ಇಳಿದು ಹೊರ ಬಂದೇ ಎಂದು ಅನಿಲ್ ಮೆಣಸಿನಕಾಯಿ (Anil Menasinakai) ಹೇಳಿದ್ದಾರೆ.

ಜಿಲ್ಲೆಯಲ್ಲಿ ರೌಡಿಶೀಟರ್ಗಳ ವರ್ತನೆ ಮಿತಿಮೀರಿದ್ದು, ಅಲ್ಲೇ ಪಕ್ಕದಲ್ಲಿ ಪೆಟ್ರೋಲ್ ಬಂಕ್ ಇತ್ತು. ಪೆಟ್ರೊಲ್ ತಂದು ಕಾರು ಸುಟ್ಟು ಬಿಡಿ ಎಂದು ಹೇಳಿದರು. ಅಲ್ಲೇ ಇದ್ದ ನಮ್ಮ ಕಾರ್ಯಕರ್ತ ಪೆಟ್ರೊಲ್ ಬಾಟಲ್ ಕಸಿದುಕೊಂಡರು. ಶಾಸಕ ಎಚ್ ಕೆ ಪಾಟೀಲ್ ಸೋಲಿನ ಭೀತಿಯಿಂದ ಈ ರೀತಿ ಮಾಡುತ್ತಿದ್ದಾರೆ. ಪ್ರಾಮಾಣಿಕ, ಪಾರದರ್ಶಕ ಚುನಾವಣೆಗೆ ಎಚ್ ಕೆ ಪಾಟೀಲರಿಗೆ ಮನವಿ ಮಾಡಿದ್ದೇವೆ. ಕಳೆದ ಬಾರಿ ಚುನಾವಣೆಯಲ್ಲೂ ಹುಲಕೋಟಿ ಗ್ರಾಮದಲ್ಲಿ ಕರಪತ್ರ ಹಂಚಲು ಬಿಡಲಿಲ್ಲ. ಬಿಜೆಪಿ ಶಕ್ತಿಯನ್ನ ಕಾಂಗ್ರೆಸ್ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಎಚ್.ಕೆ ಪಾಟೀಲ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಾಗ ಎಚ್ ಕೆ ಪಾಟೀಲ್ ಎಸಿ ಕಚೇರಿಯಲ್ಲಿಯೇ ಇದ್ದರು. ಇದನ್ನು ಅವರು ತಡೆಯಬಹುದಿತ್ತು. ಆದರೆ ಗಲಾಟೆ ತಡೆಯುವ ಕೆಲಸ ಮಾಡಲಿಲ್ಲಿ. ಇದರ ಉದ್ದೇಶ ನನ್ನ ಕಾರ್ ಸುಟ್ಟರೆ ನನ್ನ ಸ್ಥಿತಿ ಏನಾಗುತ್ತಿತ್ತು. ಈ ದಬ್ಬಾಳಿಕೆ ನಡೆಯಲ್ಲ ಎಚ್ಚರಿಕೆ ಎಂದು ಎಚ್ಚರಿಕೆ ನೀಡಿದ್ದಾರೆ.