Kornersite

Bengaluru Just In Karnataka State

Metro: ಬಿಸಿಲಿನ ತಾಪಮಾನ; ಮೆಟ್ರೋ ನಿಲ್ದಾಣದ ಬಳಿ ಬೆಂಕಿ!

ಕಳೆದ ವರ್ಷಕ್ಕಿಂತಲೂ ಈ ಬಾರಿ ಅಧಿಕ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಬಿಸಿಲಿನ ಎಫೆಕ್ಟ್ (Heat Stroke) ಜೋರಾಗಿದ್ದು, ಹಳಿಯಲ್ಲಿರುವ ರಬ್ಬರ್‌ ಗೆ ಬೆಂಕಿ ತಗುಲಿ 20 ನಿಮಿಷಗಳ ಕಾಲ ಮೆಟ್ರೋ (Metro) ರೈಲು ಸಂಚಾರವನ್ನು ಬಂದ್ ಮಾಡಿದ ಘಟನೆ ನಡೆದಿದೆ.


ಸೋಮವಾರ ಬೆಳಗ್ಗೆ 11 ಘಂಟೆಗೆ ನೇರಳೆ ಮಾರ್ಗದ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿ ಬರುತ್ತಲೇ ಈ ಘಟನೆ ನಡೆದಿದೆ. ಸೂರ್ಯನ ಶಾಖದಿಂದಾಗಿ ಮೆಟ್ರೋ ಹಳಿಯ ರಬ್ಬರ್‌ಗೆ ಬೆಂಕಿ ತಗುಲಿದ್ದನ್ನು ಗಮನಿಸಿದ ಚಾಲಕ, ತಕ್ಷಣ ಮುನ್ನೆಚ್ಚರಿಕೆಯ ಕ್ರಮವಾಗಿ ರೈಲು ನಿಲ್ಲಿಸಿದ್ದಾರೆ.
ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿಯಿದ್ದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ಆರಿಸಿದ್ದಾರೆ. ರಬ್ಬರ್ ತಣ್ಣಗಾದ ಬಳಿಕ ಸಹಜವಾಗಿಯೇ ಮೆಟ್ರೋ ಪ್ರಯಾಣವನ್ನು ಮರು ಪ್ರಾರಂಭಿಸಲಾಯಿತು.

ಘಟನೆಯಿಂದಾಗಿ ಸುಮಾರು 20 ನಿಮಿಷಗಳ ಕಾಲ ಮೆಟ್ರೋ ಸಂಚಾರ ವ್ಯತ್ಯಯವಾಗಿತ್ತು. ಇದರಿಂದಾಗಿ ಆ ಮಾರ್ಗದ ಮೆಟ್ರೋದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು (Passengers) ಪರದಾಡುವಂತಾಯಿತು.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ