ಚುನಾವಣೆಯ ತರಬೇತಿ ಸಂದರ್ಭದಲ್ಲಿ ನೌಕರಸ್ಥರೊಬ್ಬರು ಸಾವನ್ನಪ್ಪಿ, ಬದುಕಿದ್ದರು ಎಂದು ತಿಳಿದು ಬಂದಿತ್ತು. ಆದರೆ, ಆ ವ್ಯಕ್ತಿ ಈಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಚಾಮರಾಜನಗರದ ಹನೂರು ಪಟ್ಟಣದಲ್ಲಿ ನಡೆದಿತ್ತು. ಆದರೆ ಈಗ ಬಂದಿರುವ ವರದಿಗಳ ಪ್ರಕಾರ ಆ ವ್ಯಕ್ತಿ ಮತ್ತೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೆಮಿಕಲ್ ರಿಯಾಕ್ಷನ್ ನಿಂದ ಕೆಲಮೊಮ್ಮೆ ಹೀಗಾಗಲಿದೆ. ಮೈಸೂರಿನ ಖಾಸಗಿ ಆಸ್ಪತ್ರೆ ಆತ ಮೃತನೆಂದು ಘೋಷಿಸಿದ್ದಾರೆಂದು ಡಿಎಚ್ಒ ವಿಶ್ವೇಶ್ವರಯ್ಯ ಹೇಳಿದ್ದಾರೆ.
ಸರ್ಕಾರಿ ನೌಕರಸ್ಥರಾಗಿದ್ದ ಜಗದೀಶ್ ಜೀವಂತವಿರುವ ನೌಕರ, ಹನೂರು ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ಎಆರ್ ಓ ಹಾಗೂ ಪಿಆರ್ ಒಗಳಿಗೆ ನಡೆದ ಚುನಾವಣಾ ತರಬೇತಿಯಲ್ಲಿ ಭಾಗವಹಿಸಿದ್ದರು. ತರಬೇತಿ ಆರಂಭವಾಗುತ್ತಿದ್ದಂತೆ ಜಗದೀಶ್ ಎದೆ ನೋವಿನಿಂದ ಕುಸಿದು ಬಿದ್ದಿದ್ದರು. ಹೀಗಾಗಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಜಿಲ್ಲಾಧಿಕಾರಿ ಡಿಎಸ್ ರಮೇಶ್ ಸ್ಥಳಕ್ಕೆ ಭೇಟಿ ನೀಡಿ ವೈದ್ಯಾಧಿಕಾರಿಗಳಿಂದ ಮಾಹಿತಿ ಸಹ ಪಡೆದಿದ್ದರು. ನೌಕರರು ಜಗದೀಶ್ ಗೆ ಶ್ರದ್ಧಾಂಜಲಿ ಸಲ್ಲಿಸಿ ಸೂಕ್ತ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದರು.
ಹನೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜಗದೀಶ್ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯುಲಾಗಿತ್ತು. ಎರಡು ಮೂರು ತಾಸು ಕಳೆದ ಬಳಿಕ ಅಚಾನಕ್ಕಾಗಿ ತಾಯಿ ಜಗದೀಶ್ ಶವ ಗಮನಿಸಿದ್ದು, ಕೈ ಕಾಲು ಆಡುತ್ತಿದ್ದನ್ನು ಕಂಡು ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.