ನಟಿ ಇಲಿಯಾನಾ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಂತ ಖುದ್ದು ತಮ್ಮ ಇನ್ ಸ್ಟಾಗ್ರಾಮ್ ಅಕೌಂಟ್ ನಲ್ಲಿ ಫೋಟೋ ಶೇರ್ ಮಾಡುವ ಮೂಲಕ ನ್ಯೂಸ್ ಲೀಕ್ ಮಾಡಿದ್ದಾರೆ.
ಇಲಿಯಾನಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಡ್ವೆಂಚರ್ ಬಿಗಿನ್ಸ್ ಎಂದು ಬರೆದಿರುವ ಟೀ ಶರ್ಟ್ ಹಾಗೂ ಮಮ್ಮಾ ಎಂದು ಬರೆದಿರುವ ಲೋಕೆಟ್ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಫೋಟೋಗಳಿಗೆ “ಶೀಷ್ರದಲ್ಲೇ ನನ್ನ ಪುಟ್ತ ಡಾರ್ಲಿಂಗ್ ಭೇಟಿಗಾಗಿ ಕಾಯ್ತಾ ಇದ್ದೇನೆ: ಎಂದು ಬರೆದಿದ್ದಾರೆ.
ಇಲಿಯಾನಾ ಅವರ ಈ ಪೋಸ್ಟ್ ಗೆ ಸಾಕಷ್ಟು ಜನ ಶುಭಾಷಯ ತಿಳಿಸಿದ್ದಾರೆ. ಮಗುವಿನ ಬಗ್ಗೆ ಪೋಸ್ಟ್ ಏನೋ ಹಾಕಿದ್ದಾರೆ. ಆದ್ರೆ ಮದುವೆ ಬಗ್ಗೆ ಮಾತ್ರ ಸುಳಿವು ಕೊಟ್ತಿಲ್ಲ. ಯಾರನ್ನ ಮ್ದುವೆಯಾಗಿದ್ದಾರೆ ಎಂದು ಬಹಿರಂಗ ಪಡಿಸಿಲ್ಲ. ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಜೊತೆ ಇಲಿಯಾನಾ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.
ಇದೀಗ ಇಲಿಯಾನಾ ಹಾಕಿರುವ ಪೋಸ್ಟ್ ಮಾತ್ರ ಹಲವು ಪ್ರಶ್ನೇಗಳಿಗೆ ಕಾರಣವಾಗಿದೆ. ಮಗುವಿಗೆ ತಂದೆ ಯಾರು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.