Kornersite

International Just In National

Breaking News: ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿ ಮುಂದುವರೆದ ಭಾರತ!!!

ವದೆಹಲಿ : ಇಲ್ಲಿಯವರೆಗೂ ಜಗತ್ತಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ(Population) ಹೊಂದಿರುವ ರಾಷ್ಟ್ರ ಯಾವುದು ಎಂದರೆ ಅದು ಚೀನಾ ಆಗಿತ್ತು. ಆದರೆ, ಈಗ ಚೀನಾವನ್ನು (China) ಭಾರತ (India) ಹಿಂದಿಕ್ಕಿದ್ದು, ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರ ಹೊಮ್ಮಿದೆ.

ವಿಶ್ವಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತವು 142.86 ಕೋಟಿ ಜನಸಂಖ್ಯೆ ಹೊಂದುವ ಮೂಲಕ ಮೊದಲ ಸ್ಥಾನಕ್ಕೆ ಏರಿದ್ದು, 142.57 ಕೋಟಿ ಜನಸಂಖ್ಯೆಯನ್ನು ಹೊಂದುವ ಮೂಲಕ ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ.

ವಿಶ್ವಸಂಸ್ಥೆಯ ಡ್ಯಾಶ್‌ಬೋರ್ಡ್ ಹೇಳಿಕೆಯಂತೆ, ಭಾರತದ ಜನಸಂಖ್ಯೆಯ ಶೇ.25 ರಷ್ಟು ಜನರು 0-14 ವರ್ಷ ವಯಸ್ಸಿನ ನಡುವ ಇದ್ದು, ಶೇ.18 ರಷ್ಟು ಜನರು 10-19 ವರ್ಷ ವಯಸ್ಸಿನ ವ್ಯಾಪ್ತಿಯಲ್ಲಿದ್ದಾರೆ. 10-24 ವರ್ಷದ ನಡುವಿನ ಜನರು ಶೇ.26 ರಷ್ಟಿದ್ದು, 15-64 ವರ್ಷ ವಯಸ್ಸಿನವರು ಶೇ.68 ರಷ್ಟು ಇದ್ದಾರೆ ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರು ಶೇ.7 ರಷ್ಟು ಇದ್ದಾರೆ.

ಕೇರಳ ಹಾಗೂ ಪಂಜಾಬ್ ನಲ್ಲಿ ವೃದ್ಧರ ಸಂಖ್ಯೆ ಹೆಚ್ಚಿದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ವಿವಿಧ ಏಜೆನ್ಸಿಗಳು ನಡೆಸಿದ ಹಲವಾರು ಅಧ್ಯಯನಗಳ ಪ್ರಕಾರ ಭಾರತದ ಜನಸಂಖ್ಯೆಯು 3 ದಶಕಗಳ ವರೆಗೆ ನಿರಂತರವಾಗಿ ಹೆಚ್ಚಲಿದ್ದು 165 ಕೋಟಿಗೆ ಭಾರತದ ಜನಸಂಖ್ಯೆ ತಲುಪಬಹುದು ಎಂದು ಅಂದಾಜಿಸಲಾಗಿದೆ.

You may also like

National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ
International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು