Washington : ಈಕ್ವೆಡಾರ್ ನಲ್ಲಿ (Ecuador Beach) ಬೀಚ್ ಗೆ ತೆರಳಿದ್ದ ಮೂವರು ಯುವತಿಯರನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ನಂತರ ಸಂತ್ರಸ್ತರು ಕಳುಹಿಸಿದ್ದ ಸಂದೇಶ ಬಹಿರಂಗವಾಗಿದೆ.
ಪ್ರವಾಸಕ್ಕೆಂದು ತೆರಳಿದ್ದ ಡೆನಿಸ್ ರೆಯ್ನಾ (19) ಯುಲಿಯಾನಾ ಮಾಸಿಯಾಸ್ (21) ಹಾಗೂ ನಯೆಲಿ ತಫಿಯಾ (22) ಯುವತಿಯರು ನಾಪತ್ತೆಯಾಗಿದ್ದರು. ಅವರೆಲ್ಲ ಏ. 5 ರಂದು ಹತ್ಯೆಗೀಡಾಗಿದ್ದರು ಎನ್ನಲಾಗಿದೆ. ಆದರೆ, ಅದಕ್ಕೂ ಮುನ್ನ ತಮ್ಮ ಆಪ್ತರಿಗೆ ʻಇಲ್ಲೇನಾದರು ಘಟನೆ ಸಂಭವಿಸಬಹುದು ಅನ್ನಿಸುತ್ತಿದೆʼ ಅಂತಾ ಸಂದೇಶ ಕಳುಹಿಸಿರುವುದು ಸದ್ಯ ಬೆಳಕಿಗೆ ಬಂದಿದೆ.
ಹತ್ಯೆಯಾವದರಲ್ಲಿ ಮಾಸಿಯಾಸ್ ಗಾಯಕಿಯಾಗಿದ್ದರು, ಮೃತ ನಯೆಲಿ ತಫಿಯಾ ತಾಯಿ ಹಾಗೂ ಡೆನಿಸ್ ರೆಯ್ನಾ ಕೃಷಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದರು (Agricultural Engineering Student) ಎಂದು ತಿಳಿದು ಬಂದಿದೆ. ಏ. 5 ರಂದು ಮೂವರು ಯುವತಿಯರನ್ನು ದುಷ್ಕರ್ಮಿಗಳು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ನಂತರ ಈಕ್ವೆಡಾರ್‌ನ ಕ್ವಿನಿಂಡೆ ಬಳಿಯ ಎಸ್ಮೆರಾಲ್ಡಾಸ್ ನದಿಯ ಬಳಿ ಹೂತುಹಾಕಿದ್ದಾರೆ. ಈ ಸ್ಥಳದಲ್ಲಿ ನಾಯಿಯೊಂದು ದುರ್ವಾಸನೆ ಹೊರಬರುತ್ತಿರುವುದನ್ನು ಕಂಡು ಹಿಡಿದಿದೆ. ಇದನ್ನು ಕಂಡ ಮೀನುಗಾರರ ಗುಂಪು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆ.
ಸಾವಿಗೂ ಮುನ್ನ ಏಪ್ರಿಲ್ 4ರಂದು ಸಂತ್ರಸ್ತೆ ತಫಿಯಾ ತನ್ನ ಸಹೋದರನಿಗೆ ತಾನಿರುವ ಲೈವ್ ಲೊಕೇಶನ್ ನೊಂದಿಗೆ ಸುಮ್ಮನೆ ಕಳುಹಿಸಿರುವುದಾಗಿ ವಾಟ್ಸಪ್ ಸಂದೇಶ ಕಳುಹಿಸಿದ್ದಾಳೆ. ಮೃತ ರೇನಾ ಸಹ ತಾನು ನಾಪತ್ತೆಯಾಗುವ ಗಂಟೆಗಳಿಗೂ ಮೊದಲು ತನ್ನ ಸ್ನೇಹಿತನಿಗೆ ʻಇಲ್ಲೇನೋ ಆಗಲಿದೆ ಎಂದು ಅನಿಸುತ್ತಿದೆ. ನನಗೆ ಏನಾದರೂ ಆಗಬಹುದು. ಆದರೆ, ನೆನಪಿರಲಿ ನಾನು ನಿನ್ನನ್ನ ತುಂಬಾ ಪ್ರೀತಿಸುತ್ತೇನೆʼ ಎಂದು ಸಂದೇಶ ಕಳುಹಿಸಿದ್ದು, ಈಗ ಬೆಳಕಿಗೆ ಬಂದಿದೆ.
ಅವರನ್ನ ಸಮಾಧಿ ಮಾಡಿ ಹೂತುಹಾಕುವುದಕ್ಕೂ ಮುನ್ನ ಬಾಯಿಗೆ ಬಟ್ಟೆ ತುರುಕಲಾಗಿತ್ತು. ಮೃತಪಟ್ಟ ಸ್ಥಳದಲ್ಲಿ ಅವರ ಬೀಚ್ ಉಡುಪುಗಳು, ಸ್ನಾನದ ಸೂಟ್‌ಗಳು, ಲಘು ಉಡುಪುಗಳು, ಶಾರ್ಟ್ಸ್‌ಗಳನ್ನ ಕ್ವಿನಿಂಡೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಸ್ಥಳೀಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.