ಭಾರತದಲ್ಲಿ ಬೆಟ್ಟಿಂಗ್ ಆಡುವುದನ್ನು ಬ್ಯಾನ್ ಮಾಡಲಾಗಿದೆ. ಆದರೂ ಸುಲಭವಾಗಿ ಬೆಟ್ಟಿಂಗ್ ಪ್ರಿಯರು ಯಾವ ಅಡ್ಡಿ ಆತಂಕವೂ ಇಲ್ಲದೇ ಬೆಟ್ಟಿಂಗ್ ಆಡಲು ಹಲವಾರು ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಲಭ್ಯವಿವೆ. ವಿಪರ್ಯಾಸವೆಂದರೆ ಭಾರತದ ಬಹುತೇಕ ಎಲ್ಲಾ ಸ್ಟಾರ್ ಪ್ಲೇಯರ್ಸ್ ಈ ಅಪ್ಲಿಕೇಶನ್‌ಗಳನ್ನು ಪ್ರಚಾರ ಕೂಡ ಮಾಡಿದ್ದಾರೆ. ಬೆಟ್ಟಿಂಗ್ ಚಟಕ್ಕೆ ಬಿದ್ದ ವ್ಯಕ್ತಿಯೋರ್ವ ಸಾಲು ಸಾಲು ಸೋಲು ಕಂಡ ಬಳಿಕ ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಯೋಜನೆ ಹಾಕಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಮೊಹಮ್ಮದ್ ಸಿರಾಜ್ ಬಳಿ ಸಲಹೆ ಕೇಳಿದ್ದಾನೆ.

ಡ್ರೈವರ್ ವೃತ್ತಿಯನ್ನು ಮಾಡಿ ಬದುಕುತ್ತಿದ್ದ ವ್ಯಕ್ತಿಯೊಬ್ಬ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡ ಕಾರಣ ತನಗೆ ಸಹಾಯ ಕೋರಿ ಮೊಹಮ್ಮದ್ ಸಿರಾಜ್‌ಗೆ ವಾಟ್ಸಪ್ ಮೂಲಕ ಸಂದೇಶ ಕೇಳಿದ್ದಾನೆ.

ಟೂರ್ನಿಯ ಒಳಗೆ ಏನೆಲ್ಲಾ ನಡೆಯುತ್ತೆ, ತಂಡದೊಳಗಿನ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮೊಹಮ್ಮದ್ ಸಿರಾಜ್ ಬಳಿ ಆತ ಮನವಿ ಮಾಡಿದ್ದಾನೆ. ಈ ಸಂದೇಶ ನೋಡಿದ ಕೂಡಲೇ ಮೊಹಮ್ಮದ್ ಸಿರಾಜ್ ಬಿಸಿಸಿಐ ಆಂಟಿ ಕರಪ್ಷನ್ ಬೋರ್ಡ್‌ಗೆ ದೂರು ನೀಡಿದ್ದಾರೆ. ಈ ಮೂಲಕ ಬೆಟ್ಟಿಂಗ್‌ನಲ್ಲಿ ಗೆಲ್ಲಲು ಸಲಹೆ ಕೇಳಿ ಮೊಹಮ್ಮದ್ ಸಿರಾಜ್‌ಗೆ ವಾಟ್ಸಪ್ ಸಂದೇಶ ಕಳುಹಿಸಿದ ವ್ಯಕ್ತಿ ಪೊಲೀಸರ ಅತಿಥಿಯಾಗುವುದು ಖಚಿತ ಎನ್ನಲಾಗಿದೆ.