Bangalore : ವಿಧಾನಸಭಾ ಚುನಾವಣೆಗೆ (Karnataka Election 2023) ನಾಮಪತ್ರ ಸಲ್ಲಿಸಲು ಇನ್ನೂ ಕೇವಲ ಒಂದು ದಿನ ಬಾಕಿ ಇದೆ. ಎಲ್ಲ ಪಕ್ಷಗಳಲ್ಲಿ ಕೊನೆಯ ಹಂತದ ಪ್ರಯತ್ನ ನಡೆಯುತ್ತಿದ್ದು, ಕಾಂಗ್ರೆಸ್ 5ನೇ ಪಟ್ಟಿ (Congress Candidates List) ಬಿಡುಗಡೆ ಮಾಡಿದೆ. 4 ಕ್ಷೇತ್ರಗಳಿಗೆ (ಒಂದು ಕ್ಷೇತ್ರ ಬದಲಾವಣೆ ಸೇರಿ) ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ.
ನಾಮಪತ್ರ ಸಲ್ಲಿಕೆಗೆ ಇನ್ನೊಂದು ದಿನ ಬಾಕಿ ಇರುವಾಗಲೇ ಸಿಎಂ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ. ಶಿಗ್ಗಾಂವಿ ಕ್ಷೇತ್ರದಿಂದ ಮೊಹಮ್ಮದ್ ಯೂಸುಫ್ ಸವಣೂರು ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಬುಧವಾರ ಬಿಡುಗಡೆಯಾದ 5ನೇ ಪಟ್ಟಿಯಲ್ಲಿ ಶಿಗ್ಗಾಂವಿಗೆ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.
ಪುಲಕೇಶಿನಗರಕ್ಕೆ ಎ.ಸಿ ಶ್ರೀನಿವಾಸ್, ಕೆ.ಆರ್ ಪುರಕ್ಕೆ ಡಿ.ಕೆ ಮೋಹನ್ ಹಾಗೂ ಮುಳಬಾಗಿಲು ಕ್ಷೇತ್ರಕ್ಕೆ ಮುದ್ದುಗಂಗಾಧರ್ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಿದೆ. ಶಿಡ್ಲಘಟ್ಟ, ಮಂಗಳೂರು ಉತ್ತರ, ರಾಯಚೂರು, ಅರಕಲಗೂಡು, ಸಿವಿ ರಾಮನ್ ನಗರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡದೇ ಬಾಕಿ ಉಳಿಸಿಕೊಂಡಿದೆ.