Chamarajanagar : ವರುಣಾ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರಗಳಿಂದ ಸಚಿವ ವಿ. ಸೋಮಣ್ಣ (V Somanna) ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಇಂದು ಅವರು ಚಾಮರಾಜನಗರದಲ್ಲಿ (Chamarajanagar Constituency) ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಆಸ್ತಿ ವಿವರಗಳನ್ನು ಘೋಷಿಸಿದ್ದಾರೆ.

ಸೋಮಣ್ಣ ಅವರ ಚರಾಸ್ತಿರಯನ್ನು ಗಮನಿಸಿದರೆ ಸೋಮಣ್ಣ ಅವರಿಗಿಂತ ಅವರ ಪತ್ನಿ ಶೈಲಜಾ ಶ್ರೀಮಂತರಾಗಿದ್ದಾರೆ. ವಿ. ಸೋಮಣ್ಣ ಅವರ ಬಳಿ (V Somanna) ಬಳಿ ಚರಾಸ್ತಿ 3.61 ಕೋಟಿ ಅಷ್ಟಿದ್ದರೇ, ಪತ್ನಿ ಶೈಲಜಾ ಬಳಿ 13.01 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತಿಗಿಂತ ಶೈಲಜಾ ಅವರು ಶ್ರೀಮಂತರಾಗಿದ್ದರೂ ಯಾವುದೇ ವಾಹನ ಹೊಂದಿಲ್ಲ. ಆದರೆ ಸೋಮಣ್ಣ ಅವರು 3 ಕಾರುಗಳ ಮಾಲೀಕರಾಗಿದ್ದಾರೆ.
ಸೋಮಣ್ಣ ಅವರ ಬಳಿ 4.1 ಲಕ್ಷ ರೂ. ನಗದು ಇದ್ದರೆ, ಪತ್ನಿ ಬಳಿ 9.99 ಲಕ್ಷ ನಗದು ಹೊಂದಿದ್ದಾರೆ. ಪತಿ- ಪತ್ನಿ ಇಬ್ಬರೂ ಸಾಲ ಹೊಂದಿದ್ದು ಸೋಮಣ್ಣಗೆ 2.9 ಕೋಟಿ ರೂ.ನಷ್ಟು ಸಾಲ ಮಾಡಿದ್ದಾರೆ. ಪತ್ನಿ ಶೈಲಜಾ ಅವರಿಗೆ 4.5 ಕೋಟಿ ರೂ. ಸಾಲ ಇದ್ದು, ಪತ್ನಿ ಶೈಲಜಾ ಅವರ ಬಳಿಯೇ ಸೋಮಣ್ಣ 20 ಲಕ್ಷ ಸಾಲ ಪಡೆದಿದ್ದಾರೆ. ಸೋಮಣ್ಣ ಬಳಿ 10 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ 21 ಕೋಟಿಯಷ್ಟು ಸ್ಥಿರಾಸ್ತಿ ಹೊಂದಿದ್ದಾರೆ. ಇಬ್ಬರದೂ ಸ್ವಯಾರ್ಜಿತವಾಗಿದ್ದು, ಪಿತ್ರಾರ್ಜಿತ ಆಸ್ತಿ ಹೊಂದಿಲ್ಲ.

