40ಕ್ಕೆ ಹತ್ತಿರವಿರುವ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ (Trisha) ಮದುವೆ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇತ್ತೀಚೆಗಷ್ಟೇ ಅವರು, ಮದುವೆ ಎನ್ನುವುದು ಕನಸಿನ ಮಾತು, ನನ್ನ ಜೀವನ ಅಭಿಮಾನಿಗಳಿಗೆ ಮೀಸಲು’ ಎಂದು ಹೇಳಿದ್ದರು. ಇದನ್ನು ಗಮನಿಸಿದರೆ, ಅವರು ಮದುವೆ ಆಗುವುದಿಲ್ಲವಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಈ ಹಿಂದೆ ತ್ರಿಷಾ ಉದ್ಯಮಿಯೊಬ್ಬರನ್ನು ಮದುವೆ (Marriage) ಆಗಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಕೊನೆ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ರದ್ದಾಯಿತು ಎಂಬ ಮಾತು ಕೇಳಿ ಬಂದಿತು. ಈ ಹಿಂದೆಯೂ ತ್ರಿಷಾ ಅವರ ಜೀವನದಲ್ಲಿ ಲವ್ ಫೆಲ್ಯೂವರ್ ಆಗಿದ್ದರಿಂದ ಮದುವೆ ವಿಚಾರವನ್ನೇ ಅವರು ಮರೆತಿದ್ದಾರೆ ಎಂದು ಹೇಳಲಾಗಿತ್ತು.

ವಿವಾದಿತ ಯೂಟ್ಯೂಬರ್ ಬೈಲ್ವಾನ್ ರಂಗನಾಥನ್ (Bailwan Ranganathan) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಇವರ ಹೇಳಿಕೆ ತಮಿಳು ಚಿತ್ರೋದ್ಯಮದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ. ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಬೈಲ್ವಾನ್ ರಂಗನಾಥನ್ ವಿರುದ್ಧ ಹರಿಹಾಯ್ದಿದ್ದಾರೆ. ತ್ರಿಷಾ ಇಲ್ಲಿಯವರೆಗೂ ಮದುವೆ ಆಗದೇ ಇರುವುದಕ್ಕೆ ಕಾರಣ ಸ್ಟಾರ್ ನಟರಾದ ಸಿಂಬು (Simbu) ಮತ್ತು ರಾಣಾ (Rana) ಎಂದು ಬೈಲ್ವಾನ್ ಹೇಳಿದ್ದಾರೆ. ಇಬ್ಬರ ಜೊತೆಯೂ ತ್ರಿಷಾ ಲವ್ ಇತ್ತು. ಒಬ್ಬರ ನಂತರ ಒಬ್ಬರು ತ್ರಿಷಾಗೆ ಮೋಸ ಮಾಡಿದರು. ಇದರಿಂದಾಗಿ ತ್ರಿಷಾ ಮದುವೆಯಾಗದೆ ಹಾಗೆಯೇ ಉಳಿದುಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಬೈಲ್ವಾನ್ ರಂಗನಾಥನ್ ಈ ರೀತಿಯ ಹೇಳಿಕೆಗಳನ್ನು ಕೊಡುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಅನೇಕ ಕಲಾವಿದರ ಮತ್ತು ನಿರ್ದೇಶಕರ ವಿರುದ್ಧ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಈಗ ನಟಿ ತ್ರಿಷಾ ಏನು ಮಾಡುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.