Kornersite

Bengaluru Just In Karnataka Politics State

Karnataka Assemby Election: ಕಾಂಗ್ರೆಸ್ ನ ಅಂತಿಮ ಪಟ್ಟಿ; ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧೆ!

Bangalore : ರಾಜ್ಯ ವಿಧಾನಸಭೆ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಹೀಗಾಗಿ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಇನ್ನುಳಿದ ಕ್ಷೇತ್ರಗಳ ಪಟ್ಟಿಯನ್ನು ಕಾಂಗ್ರೆಸ್ ಇಂದು ಘೋಷಿಸಿದೆ.

ಮೇ. 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ (Election) ಕಾಂಗ್ರೆಸ್ ಪಕ್ಷವು ತನ್ನ ಆರನೇ ಹಾಗೂ ಅಂತಿಮ ಪಟ್ಟಿಯನ್ನು (Final List) ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಗುರುವಾರ ನಾಮಪತ್ರ (Nomination Papers) ಸಲ್ಲಿಕೆಗೆ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿ ಕಾಂಗ್ರೆಸ್ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಯಚೂರಿನಲ್ಲಿ (Raichur) ಮೊಹಮ್ಮದ್ ಶಾಲಾಂ (Mohammed Shalam), ಶಿಡ್ಲಘಟ್ಟದಲ್ಲಿ (Sidlaghatta) ಬಿ.ವಿ ರಾಜೀವ್ ಗೌಡ (B.V.Rajeev Gowda), ಸಿವಿ ರಾಮನ್ ನಗರದಲ್ಲಿ (C.V.Raman Nagar) ಎಸ್.ಆನಂದ ಕುಮಾರ್ (S.Anand Kumar), ಅರಕಲಗೂಡಿನಲ್ಲಿ (Arkalgud) ಹೆಚ್.ಪಿ.ಶ್ರೀಧರ್ ಗೌಡ (H.P.Sridhar Gowda) ಹಾಗೂ ಮಂಗಳೂರು ನಗರ ಉತ್ತರದಲ್ಲಿ (Mangaluru City North) ಇನಾಯತ್ ಅಲಿಗೆ (Inayath Ali) ಟಿಕೆಟ್ ನೀಡಲಾಗಿದೆ. ಬುಧವಾರ ಕಾಂಗ್ರೆಸ್‌ನಿಂದ 5ನೇ ಪಟ್ಟಿ ರಿಲೀಸ್ ಮಾಡಲಾಗಿತ್ತು. ಅದೇ ದಿನ ತಡರಾತ್ರಿ ಅಂತಿಮ ಪಟ್ಟಿಯನ್ನು ರಿಲೀಸ್ ಮಾಡಿದೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು