ಇಂದು ವರ್ಷದ ಮೊದಲ ಸೂರ್ಯಗ್ರಹಣ. ಗ್ರಹಣ ಬಿಟ್ಟ ನಂತರ ಈ ಕೆಲಸಗಳನ್ನ ಮಾಡಿದ್ರೆ ನೆಗೆಟಿವ್ ಏನರ್ಜಿ ದೂರವಾಗುತ್ತದೆ.

ಬೆಳಗ್ಗೆ 7:04 ರಿಂದ ಶುರುವಾದ ಗ್ರಹಣ12:29 ರವರೆಗೆ ಸಂಭವಿಸಿದೆ. ಸೂರ್ಯಗ್ರಹಣದ ಸಮಯದಲ್ಲಿ, ಚಂದ್ರನು ಸೂರ್ಯ ಹಾಗೂ ಭೂಮಿಯ ನಡುವೆ ಬರುತ್ತಾನೆ. ಮತ್ತು ಭೂಮಿಯ ಮೇಲಿನ ಕೆಲವು ಸ್ಥಳಗಳಿಂದ ಸೂರ್ಯನನ್ನು ನೋಡಲು ಸಾಧ್ಯವಾಗುವುದಿಲ್ಲ. ಭಾರತದಲ್ಲಿ ಈ ಗ್ರಹಣ ಗೋಚರವಾಗುವುದಿಲ್ಲ ವಾದರೂ, ನೀವು ಕೆಲವೊಂದು ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. ಗ್ರಹಣ ಮುಗಿದ ತಕ್ಷಣ ಮಾಡಬೇಕಾದ ಕೆಲವು ಕಾರ್ಯಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದರಿಂದ ಗ್ರಹಣದ ನೆಗೆಟಿವ್ ಏನರ್ಜಿ ಕೊನೆಗೊಳ್ಳುತ್ತದೆ.
ಗ್ರಹಣ ಮುಗಿದ ನಂತರ ಗಂಗಾಜಲ ಹಾಕಿ ಶುಚಿಗೊಳ್ಳಿಸಬೇಕು.
ಮನೆ ಕ್ಲಿನಿಂಗ್ ಆದ ನಂತರ ಮನೆಮಂದೆ ಸ್ನಾನ ಮಾಡಬೇಕು. ಏಕೆಂದರೆ ಗ್ರಹಣದ ಪರಿಣಾಮ ವ್ಯಕ್ತಿಗಳ ಮೇಲೂ ಪರಿಣಾಮ ಬೀರುತ್ತದೆ.
ಗ್ರಹಣ ಮುಗಿದ ನಂತರ ಪೂಜೆಯ ಮನೆಯಲ್ಲಿರುವ ದೇವರ ವಿಗ್ರಹಗಳನ್ನ ಶುಚಿಗೊಳಿಸಬೇಕು. ಗ್ರಹಣದ ನಂತರ ದೇವತೆಗಳನ್ನ್ ನೋಡುವುದು ಮಂಗಳಕಾರಿ.
ಗ್ರಹಣ ಮುಗಿದ ನಂತರ ಆಹಾರ ಹಾಗೂ ನೀರಿನ ಮೇಲೆ ಹಾಕಿದ ದರ್ಬೆ ಹುಲ್ಲು ಅಥವಾ ತುಳುಸಿ ಎಲೆಯನ್ನ ತೆಗೆಯಿರಿ. ಯಾಕೆಂದ್ರೆ ದರ್ಬೆ ಹುಲ್ಲು ನೈಸರ್ಗಿಕ ಸೋಂಕು ನಿವಾರಕವಾಗಿದೆ. ಇದಾದ ಬಳಿಕ ತಾಜಾ ಆಹಾರವನ್ನು ತಯಾರಿಸಿ ಸೇವಿಸಿ.
ಗ್ರಹಣದ ನಂತರ ನೀವು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬೇಳೆ, ಗೋಧಿ, ಉಪ್ಪು, ಬಟ್ಟೆ, ಬೆಲ್ಲ, ಹತ್ತಿ ಇತ್ಯಾದಿಗಳನ್ನ ದಾನ ಮಾಡಿ.