Apple ಕಂಪನಿಯ ಸಿಇಒ ಟಿಮ್ ಕುಕ್ (Tim cook) ಭಾರತದಲ್ಲಿ ಮೊದಲ ಸ್ಟೋರ್ ಉದ್ಘಾಟನೆ ಮಾಡಿದರು. ಟಿಮ್ ಕುಕ್ ಭಾರತಕ್ಕೆ ಬಂದಿರೋದು ಸುದ್ದಿ ಆಯಿತು. ಆದ್ರೆ ಅವರ ಸ್ಯಾಲರಿ ಕೇಳಿದ್ರೆ ಮಾತ್ರ ತಲೆ ತಿರುಗೋಪು ಗ್ಯಾರಂಟಿ. ಬರೋಬ್ಬರಿ 1 ಕೋಟಿ 10 ಲಕ್ಷ್. ಇದು ವರ್ಷದ ಸ್ಯಾಲರಿ ಅಲ್ಲ ಗುರು ದಿನದ ಸ್ಯಾಲರಿ. ದಿನದ ಸ್ಯಾಲರಿಯೇ ಇಷ್ಟು ಅಂತಾದ್ರೆ ಒಟ್ಟು ಆಸ್ಥಿ ಎಷ್ಟಿರಬಹುದು..?

ಮುಂಬೈ ಹಾಗೂ ದೆಹಲಿಯಲ್ಲಿ Apple ಸ್ಟೋರ್ ಓಪನ್ ಆಗಿದೆ. ಈ ಕಾರ್ಯಕ್ರಮಕ್ಕೆ ಟಿಮ್ ಕುಕ್ ಆಗಮಿಸಿ ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಕ್ಕೆ ಮುಖೇಶ್ ಅಂಬಾನಿ, ಬಾಲಿವುಡ್ ನಟಿ ಮಾಧುರಿ ದಿಕ್ಷಿತ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ಸದ್ಯದಲ್ಲೇ ಪ್ರಾಧಾನಿ ನರೇಂದ್ರ ಮೋದಿಯವರನ್ನ ಟಿಮ್ ಕುಕ್ ಭೇಟಿಯಾಗಲಿದ್ದಾರೆ. ಈಗ ಅಸಲಿ ಮ್ಯಾಟರ್ ಗೆ ಬರೋಣ. ಟಿಮ್ ಕುಕ್ ದಿನದ ಸಂಬಳ 1 ಕೋಟಿ 10 ಲಕ್ಷ ಅಂದರೆ ವರ್ಷದ ಆದಾಯ 401 ಕೋಟಿ ರೂಪಾಯಿ.

ಸ್ಯಾಲರಿ ಹೆಚ್ಚಾದ್ರೆ ಸಾಕಪ್ಪಾ ಅನ್ನೋ ಈ ಜಮಾನಾದಲ್ಲಿ 61 ವರ್ಷದ ಟಿಮ್ ಕುಕ್ 2022 ರಲ್ಲಿ ತಮ್ಮ ಸಂಬಳ ತುಂಬ ಹೆಚ್ಚು ಇದೆ ಕಡಿಮೆ ಮಾಡಿ ಎಂದು ಕಂಪನಿಗೆ ಮನವಿ ಮಾಡಿದ್ದರಂತೆ. 2022 ರವರೆಗೆ ಟಿಮ್ ಕುಕ್ ವರ್ಷದ ಆದಾಯ 800-900 ಕೋಟಿ ಪಡೆಯುತ್ತಿದ್ದರಂತೆ. ಆದ್ರೆ ಟಿಮ್ ಮಾಡಿದ ಮನವಿ ನಂತರ ಸಂಬಳ ಕಡಿಮೆ ಮಾಡಲಾಗಿದೆ. ಇದರ ಜೊತೆಗೆ Apple ಕಂಪನಿಯಲ್ಲಿ ಶೇಕಡಾ 1 ರಷ್ಟು ಷೇರು ಹೊಂದಿದ್ದಾರೆ.
ಇದೀಗ ಭಾರತದಲ್ಲಿApple ಸ್ಟೋರ್ ಓಪನ್ ಮಾಡುವುದರ ಮೂಲಕ ಭಾರತವನ್ನು ಪ್ರಮುಖ ಮಾರುಕಟ್ಟೆಯನ್ನಾಗಿ ಮಾಡಲು ಹೋರಟಿದ್ದಾರೆ.

