ದೇಶದಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಮೂಢನಂಬಿಕೆಗಳ ಆಚರಣೆ ಮಾತ್ರ ಇನ್ನೂ ನಿಂತಿಲ್ಲ. ಇಂದಿಗೂ ಹಲವೆಡೆ ಜನರು ಅರ್ಥಹೀನ ಸಂಸ್ಕೃತಿಯೊಂದಿಗೆ ಬದುಕುತ್ತಿದ್ದಾರೆ. ಸದ್ಯ ಒಡಿಶಾದಲ್ಲಿ ವಿಚಿತ್ರ ಆಚರಣೆಯೊಂದು ಬೆಳಕಿಗೆ ಬಂದಿದೆ.
ಅಲ್ಲಿಯ ಬಾಲಸೋರ್ ಎಂಬಲ್ಲಿ ಮಕ್ಕಳಿಗೆ ನಾಯಿಗಳ ಜೊತೆ ಮದುವೆ ಮಾಡಲಾಗುತ್ತಿದೆ. ಇದು ದುಷ್ಟಶಕ್ತಿಗಳನ್ನು ದೂರು ಮಾಡುತ್ತದೆ ಎಂಬುವುದು ಸ್ಥಳೀಯರ ಮೂಢಬನಂಕಿಗೆ ಎನ್ನಲಾಗುತ್ತಿದೆ. ಬಾಲಸೋರ್ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳನ್ನು ದುಷ್ಟ ಶಕ್ತಿಗಳನ್ನು ದೂರವಿಡುವ ಸಲುವಾಗಿ ಬೀದಿನಾಯ ಜೊತೆ ಮದುವೆ ಮಾಡಲಾಗಿದೆ. 11 ವರ್ಷದ ಬಾಲಕ ತಪನ್ ಸಿಂಗ್ ಹೆಣ್ಣು ನಾಯಿಯನ್ನು ಮದೆಯಾಗಿದ್ದರೆ, 7 ವರ್ಷದ ಲಕ್ಷ್ಮೀ ಗಂಡು ನಾಯಿಯೊಂದಿಗೆ ಮದುವೆಯಾಗಿದ್ದಾಳೆ.
ಸೊರೊ ಬ್ಲಾಕ್ ನ ಬಂಧ್ ಸಾಹಿ ಗ್ರಾಮದ ಹೋ ಬುಡಕಟ್ಟು ಜನಾಂಗದವರ ಸಿಂಗ್ ಗಳಲ್ಲಿ ಸಣ್ಣ ಮಕ್ಕಳ ದವಡೆಯಲ್ಲಿ ಮೇಲಿನ ಹಲ್ಲು ಮೊದಲು ಹುಟ್ಟಿದರೆ ಅದು ಅಶುಭವೆಂದು ನಂಬಲಾಗುತ್ತದೆ. ಹೀಗಾದರೆ ಮಕ್ಕಳಿಗೆ ಕೆಡಕುಗಳು ಆಗುತ್ತವೆ ಎನ್ನುವುದನ್ನು ಈ ಬುಡಕಟ್ಟು ಜನಾಂಗದ ನಂಬಿಕೆ. ಹೀಗಾಗಿ ಮಕ್ಕಳಿಗೆ ಸಂಭವಿಸಬಹುದಾದ ಅಪಾಯವನ್ನು ಹೋಗಲಾಡಿಸಲು ನಾಯಿಯೊಂದಿಗೆ ಮದುವೆ ಮಾಡುತ್ತಾರೆ. ಸಮುದಾಯದ ಹಬ್ಬದ ಜೊತೆಗೆ ಆಚರಣೆಗಳು ನಡೆಯುತ್ತವೆ ಎನ್ನಲಾಗಿದೆ.