Kornersite

Bengaluru Just In Karnataka Politics State

Karnataka Assembly Election: ಕಾಂಗ್ರೆಸ್ ಅಭ್ಯರ್ಥಿಗೆ ಬಿ ಫಾರಂ ನೀಡಿದ ಬಿಜೆಪಿ!? ಯಾವುದಕ್ಕಾಗಿ ಈ ತಂತ್ರ?


Hassan : ಅರಕಲಗೂಡು (Arakalagudu) ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಬೆಳವಣಿಗೆಯೊಂದು ನಡೆದಿದ್ದು, ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ (BJP) ಹೈಕಮಾಂಡ್ ಬಿ ಮತ್ತು ಸಿ ಫಾರಂಗಳನ್ನು ನೀಡಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ (Congress) ಪಕ್ಷದ ಟಿಕೆಟ್ ವಂಚಿತ ಎಂ.ಟಿ.ಕೃಷ್ಣೇಗೌಡ ಅವರಿಗೆ (MT Krishnegowda) ಬಿ ಮತ್ತು ಸಿ ಫಾರಂ ನೀಡಲಾಗಿದೆ. ಈಗಾಗಲೇ ಬಿಜೆಪಿಯಿಂದ ಎಚ್.ಯೋಗಾರಮೇಶ್ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಅವರು ಉಮೇದುವಾರಿಕೆ ಸಲ್ಲಿಸಿದ್ದದ್ದರು. ಆದರೆ, ಎಂ.ಟಿ.ಕೃಷ್ಣೇಗೌಡಗೆ ಬಿಜೆಪಿ ಬಿ, ಸಿ ಫಾರಂ ನೀಡಿದ್ದು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಆಗಲಿದ್ದಾರಾ ಎಂಬ ಅನುಮಾನ ಸದ್ಯ ವ್ಯಕ್ತವಾಗುತ್ತಿದೆ.


ಇಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಎಚ್. ಯೋಗಾರಮೇಶ್ ನಾಮಪತ್ರ ತಿರಸ್ಕೃತವಾದರೆ ಎಂ.ಟಿ ಕೃಷ್ಣೇಗೌಡ ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಹಿಂದೆ ಎ.ಟಿ.ರಾಮಸ್ವಾಮಿ (AT Ramaswamy) ಜೆಡಿಎಸ್‌ನಲ್ಲಿದ್ದಾಗ ಅವರ ಬಲಗೈ ಬಂಟರಂತಿದ್ದ ಕೃಷ್ಣೇಗೌಡ ಕೊನೆಯ ಕ್ಷಣದವರೆಗೂ ಕಾಂಗ್ರೆಸ್ ಟಿಕೆಟ್‌ಗಾಗಿ ಹೋರಾಟ ನಡೆಸಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಸಿದ್ದರಾಮಯ್ಯ ಆಪ್ತನಿಗೆ ಟಿಕೆಟ್ ನೀಡದೆ ಡಿಕೆಶಿ ಆಪ್ತ ಶ್ರೀಧರ್‌ಗೌಡಗೆ ಟಿಕೆಟ್ ಸಿಕ್ಕಿತ್ತು..


ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಎ.ಟಿ.ರಾ ಮಸ್ವಾಮಿ ಅವರಿಗೂ ಟಿಕೆಟ್ ಕೊಡದೇ ಯೋಗಾರಮೇಶ್‌ಗೆ ಬಿಜೆಪಿ ಟಿಕೆಟ್ ನೀಡಿತ್ತು. ತಮ್ಮ ನಾಲ್ಕು ದಶಕದ ಎದುರಾಳಿ ಎ.ಮಂಜು ಮಣಿಸಲು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಹೊಸ ದಾಳ ಉರುಳಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು