Kornersite

Crime International Just In

Lady Fight: ಯುವತಿಯ ಫೈಟ್ ಕಂಡು ದಂಗಾದ ಜನರು; ತಂಟೆಗೆ ಬಂದವರ ಕಥೆ ಮಟಾಷ್! ವಿಡಿಯೋ ವೈರಲ್!

ಲೇಡಿ ಬ್ರೂಸ್ ಲೀ ಎಂದೇ ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋವಂದು ಸಖತ್ ವೈರಲ್ ಆಗುತ್ತಿದೆ. ಪುರುಷರಿಬ್ಬರ ಜೊತೆ ಮಹಿಳೆಯೊಬ್ಬರು ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಜಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗಿದ್ದು, ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಹೊಟೇಲ್ ನಲ್ಲಿ ಪುರುಷರಿಬ್ಬರು ಗ್ರಾಹಕರಂತೆ ಬಂದು ಕುಳಿತಿದ್ದಾರೆ. ಮಹಿಳೆಯೊಬ್ಬಳು ಗ್ರಾಹಕರಿಗೆ ಆಹಾರವನ್ನು ಸರ್ವ್ ಮಾಡುತ್ತಿದ್ದಂತೆ ಕಂಡು ಬರುತ್ತಿದೆ. ಒಬ್ಬ ಹಠಾತ್ತನೆ ಎದ್ದು ಆಕೆಯ ಕೈಯನ್ನು ಹಿಡಿಯಲು ಯತ್ನಿಸಿದ್ದಾನೆ. ಆಕೆ ತನ್ನ ಬಲಗೈಯಿಂದ ಎರಡು ಅಪ್ಪರ್‌ ಕಟ್‌ ಗಳನ್ನು ನೀಡುತ್ತಾಳೆ ಮತ್ತು ಎಡಗೈಯಿಂದ ಅವನ ಬಲಗೈಯನ್ನು ಲಾಕ್ ಮಾಡುವಾಗ ತೊಡೆಸಂದು ಪ್ರದೇಶಕ್ಕೆ ಒದೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೀಡಿಯೊವನ್ನು @cctvidiots ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಜೊತೆಗೆ “ಲೇಡಿ ಬ್ರೂಸ್ ಲೀ” ಎಂಬ ಶೀರ್ಷಿಕೆ ನೀಡಲಾಗಿದೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ