ಉದ್ಯಮಿ ಎಲಾನ್ ಮಸ್ಕ್ ಒಡೆತನದಲ್ಲಿ ಸ್ಪೇಸ್ ಎಕ್ಸ್ ನಿರ್ಮಿಸಿದ್ದ ಜಗತ್ತಿನ ಅತಿದೊಡ್ಡ ರಾಕೆಟ್ ಸ್ಪೇಸ್ ಎಕ್ಸ್ ನ ರಾಕೆಟ್ ಪ್ರಾಯೋಗಿಕ ಉಡಾವಣೆಯಲ್ಲಿಯೇ ಸ್ಪೋಟಗೊಂಡಿದೆ.

ಟೆಕ್ಸಾಸ್ ನ ಬೊಕಾ ಚಿಕಾದಲ್ಲಿರುವ ಖಾಸಗಿ ಸ್ಪೇಸ್ ಎಕ್ಸ್ ಕಂಪೆನಿಯ ಸ್ಟಾರ್ ಬೆಸ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಈ ದೈತ್ಯಾಕಾರದ ರಾಕೆಟ್ ಉಡಾವಣೆ ಮಾಡಲಾಗಿತ್ತು. ಆದರೆ ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡಿದ್ದು, ಗಲ್ಫ್ ಆಫ್ ಮೆಕ್ಸಿಕೊಗೆ ಅಪ್ಪಳಿಸಿದೆ.

ಗಗನಯಾತ್ರಿಗಳನ್ನು ಚಂದ್ರ, ಮಂಗಳ ಹಾಗೂ ಅದರಾಚೆಗಿನ ಗ್ರಹಗಳಿಗೆ ಕಳುಹಿಸುವ ಉದ್ದೇಶದಿಂದ ಸ್ಟಾರ್ ಶಿಪ್ ರಾಕೆಟ್ ಅನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಉಡಾವಣೆಯಾದ ಮೂರು ನಿಮಿಷಗಳಲ್ಲಿ ಮೊದಲ ಹಂತದಿಂದ ಸ್ಟಾರ್ ಶಿಪ್ ಕ್ಯಾಪ್ಸುಲ್ ಬೇರ್ಪಡಬೇಕಿತ್ತು. ಬೇರ್ಪಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಕೆಟ್ ಮಧ್ಯದಲ್ಲಿಯೇ ಸ್ಟೋಟಗೊಂಡಿದೆ. ಸ್ಟೋಟಗೊಂಡ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.