Kornersite

Bengaluru Just In Karnataka National Tech

Twitter Blue: ಸೆಲೆಬ್ರಿಟಿಗಳಿಗೆ ಶಾಕ್; ಟ್ವಿಟರ್ ನಲ್ಲಿ ಬ್ಲೂ ಟಿಕ್ ಮಾಯ!

ಟ್ವಿಟರ್ ನಲ್ಲಿ ಸೆಲೆಬ್ರಿಟಿಗಳ ಖಾತೆ ಸುಲಭವಾಗಿ ಗುರುತಿಸಲು ಸಹಕಾರಿ ಆಗುತ್ತಿದ್ದುದು ಬ್ಲೂಟಿಕ್ನಿಂದಾಗಿ. ಸೆಲೆಬ್ರಿಟಿಗಳ ನಕಲಿ ಖಾತೆ ಯಾವುದು ಹಾಗೂ ಅಸಲಿ ಖಾತೆ ಯಾವುದು ಎಂಬುದು ನೀಲಿ ಟಿಕ್ನಿಂದ ಸುಲಭದಲ್ಲಿ ಗೊತ್ತಾಗುತ್ತಿತ್ತು. ಆದರೆ, ಎಲ್ಲ ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯವಾಗಿದೆ.

ಮರಳಿ ಬ್ಲೂಟಿಕ್ (Twitter Blue) ಪಡೆಯಬೇಕು ಎಂದರೆ ಹಣ ಪಾವತಿಸಬೇಕು. ಏಪ್ರಿಲ್ 20ರಿಂದ ಈ ನಿಯಮ ಜಾರಿಗೆ ಬಂದಿದೆ. ಹೀಗಾಗಿ, ಸೆಲೆಬ್ರಿಟಿಗಳ ಖಾತೆಯೂ ಜನಸಾಮಾನ್ಯರ ಖಾತೆಯಂತಾಗಿದೆ.

ಎಲಾನ್ ಮಸ್ಕ್ ಟ್ವಿಟರ್ ಸಿಇಒ ಆದ ಬಳಿಕ ಹೊಸ ಹೊಸ ನಿಯಮ ಜಾರಿಗೆ ತರುತ್ತಿದ್ದಾರೆ. ಅದರಲ್ಲಿ ಬ್ಲೂ ಪಡೆಯಲು ಹಣ ಪಾವತಿಸಬೇಕು ಎಂಬುದು ಕೂಡ ಒಂದು. ಈ ಮೊದಲು ಸೆಲೆಬ್ರಿಟಿಗಳು ಖಾತೆ ತೆರೆಯುತ್ತಾರೆ ಎಂದಾದರೆ ಟ್ವಿಟರ್ ಕಡೆಯಿಂದ ನೀಲಿ ಟಿಕ್ ಸಿಗುತ್ತಿತ್ತು. ಆದರೆ, ಈಗ ಹಾಗಿಲ್ಲ. ಟ್ವಿಟರ್ ಬ್ಲೂ ಪಡೆಯಬೇಕು ಎಂದಾದರೆ ತಿಂಗಳು ಅಥವಾ ಒಂದು ವರ್ಷದ ಚಂದಾದಾರತ್ವ ಪಡೆಯಬೇಕು. ಈ ಕ್ರಮದಿಂದ ಹಲವಾರು ಸೆಲೆಬ್ರಿಟಿಗಳು ತಮ್ಮ ನೀಲಿ ಟಿಕ್ ಮಾರ್ಕ್ ಅನ್ನು ಕಳೆದುಕೊಂಡಿದ್ದಾರೆ. ಈಗ ಇದನ್ನು ಮರಳಿ ಪಡಯಬೇಕು ಎಂದಾದರೆ ಹಣ ಪಾವತಿಸಬೇಕು. ಬ್ಲೂಟಿಕ್ಗಾಗಿ ಒಂದು ತಿಂಗಳಿಗೆ 900 ಅಥವಾ ವರ್ಷಕ್ಕೆ 9400 ರೂಪಾಯಿ ಪಾವತಿಸಬೇಕು ಎಂದು ಟ್ವಿಟರ್ ತಿಳಿಸಿದೆ ಎನ್ನಲಾಗಿದೆ.

ಯಶ್, ಅಲ್ಲು ಅರ್ಜುನ್, ಟ್ವಿಟರ್ನಲ್ಲಿ ಯಾವಾಗಲೂ ಆ್ಯಕ್ಟೀವ್ ಆಗಿರುವ ಅಮಿತಾಭ್ ಬಚ್ಚನ್ ಸೇರಿ ಎಲ್ಲಾ ಸೆಲೆಬ್ರಿಟಿ ಟ್ವಿಟರ್ ಬಳಕೆದಾರರ ಬ್ಲೂಟಿಕ್ ಮಾಯವಾಗಿದೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ