ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ನಟಿಸಿರುವ ಓಂ ರಾವುತ್ ನಿರ್ದೇಶನದ ʼಆದಿಪುರುಷʼ ಚಿತ್ರ ಜೂನ್ 16 ರಂದು ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ಅಂದುಕೊಂಡಂತೆ ಅಗಿದ್ದರೆ, ಜನೇವರಿಯಲ್ಲಿಯೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಗ್ರಾಫಿಕ್ಸ್ ಅಂತ ಟ್ರೋಲ್ ಆದ ಹಿನ್ನೆಲೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಸದ್ಯ ಜೂನ್ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಇದರ ಬೆನ್ನಲ್ಲೆ, ಇಂದು ಚಿತ್ರದ ಜೈ ಶ್ರೀರಾಮ್ ಎಂಬ ಲಿರಿಕಲ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಪ್ಯಾನ್ಸ್‌ಗೆ ಅಕ್ಷಯ ತೃತೀಯ ಉಡುಗೊರೆ ನೀಡಿದೆ.
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಆದಿಪುರುಷ ಚಿತ್ರದ ಪ್ರಚಾರ ಮಾಡಲಾಗುತ್ತಿದೆ.

ಇಂದು ಚಿತ್ರದ ಜೈ ಶ್ರೀರಾಮ್.. ಎಂಬ ಲಿರಿಕಲ್ ಸಾಂಗ್‌ನ್ನು ಬಿಡುಗಡೆಯಾಗಿದೆ. ಗ್ರಾಫಿಕ್ಸ್‌ಗೆ ಹೆಚ್ಚು ಸಮಯ ತೆಗೆದುಕೊಂಡು ವಿಶುವಲ್‌ಗಳನ್ನು ವಂಡರ್‌ಫುಲ್ ಆಗಿ ಮಾಡಿದ್ದೇವೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಆದಿಪುರುಷ ಸಿನಿಮಾದಲ್ಲಿ, ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸಿದ್ದು, ಬಾಲಿವುಡ್ ನಾಯಕಿ ಕೃತಿ ಸನೋನ್ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ರಾವಣಾಸುರನ ಪಾತ್ರವನ್ನು ನಿರ್ವಹಿಸಿದ್ದಾರೆ.