Kornersite

Just In Tech

ChatGPT: ಚಾಟ್‌ಜಿಪಿಟಿ ಬಳಸಿ ಪರೀಕ್ಷೆಗೆ ತಯಾರಿ!

ಇಂದಿನ ತಂತ್ರಜ್ಞಾನ (Technology) ಯುಗದಲ್ಲಿ ಚಾಟ್‌ಜಿಪಿಟಿಯು (ChatGPT) ಸಾಕಷ್ಟು ಪವಾಡಗಳನ್ನೇ ಸೃಷ್ಟಿಸುತ್ತಿದೆ. ಚಾಟ್‌ಜಿಪಿಟಿ ಶಿಕ್ಷಣ, ತಂತ್ರಜ್ಞಾನ, ಬ್ಯುಸಿನೆಸ್ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕಮಾಲ್ ಮಾಡುತ್ತಿದೆ. ಕೆಲವು ಸಂಸ್ಥೆಗಳು ಚಾಟ್‌ಜಿಪಿಟಿಯನ್ನು ಪ್ರಾಯೋಗಿಕವಾಗಿ ತಮ್ಮ ಕೆಲವೊಂದು ಯೋಜನೆಗಳಲ್ಲಿ ಬಳಸಿಕೊಂಡಿದ್ದು ಸಫಲತೆಯನ್ನು ಗಳಿಸಿವೆ.

ರೆಡ್ಡಿಟ್‌ನಲ್ಲಿ ಚಾಟ್‌ಜಿಪಿಟಿಯ ಅನುಭವಗಳನ್ನು ಹಂಚಿಕೊಂಡಿರುವ ವಿದ್ಯಾರ್ಥಿಯೊಬ್ಬರು ಬರೇ ಮೂರು ದಿನಗಳಲ್ಲಿ ನಡೆಯುವ ಪರೀಕ್ಷೆಗೆ ತಯಾರಿ ನಡೆಸಲು ಚಾಟ್‌ಜಿಪಿಟಿ ಬಳಸಿಕೊಂಡಿರುವ ಕುರಿತು ಹೇಳಿದ್ದಾರೆ. ಪರೀಕ್ಷೆಗೆ ಇನ್ನೇನು ಮೂರು ದಿನಗಳು ಮಾತ್ರ ಬಾಕಿ ಉಳಿದಿತ್ತು, ತರಗತಿಗಳಲ್ಲಿ ನಡೆದ ಯಾವುದೇ ಪಾಠ ಪ್ರವಚನಗಳಿಗೆ ಈ ವಿದ್ಯಾರ್ಥಿ ಹಾಜರಾಗಿರಲಿಲ್ಲ. ಅಂತೆಯೇ ಪಠ್ಯಗಳ ರೆಕಾರ್ಡಿಂಗ್‌ಗಳನ್ನು ಕೇಳಿರಲಿಲ್ಲ. ಏನು ಮಾಡುವುದು ಎಂಬ ಗೊಂದಲ ಹಾಗೂ ಭಯದಲ್ಲಿದ್ದಾಗ ನೆರವಿಗೆ ಬಂದಿದ್ದೇ ಚಾಟ್‌ಜಿಪಿಟಿ ಎಂದು ಆ ವಿದ್ಯಾರ್ಥಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.


ಕೆಲವೊಂದು ಪಾಠಗಳನ್ನು ಟ್ರಿಮ್ ಮಾಡಿ ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿಕೊಂಡು ಈ ವಿದ್ಯಾರ್ಥಿ ಪಾಠಗಳನ್ನು ಅರ್ಥಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಹೀಗೆ ಚಾಟ್‌ಜಿಪಿಟಿಯ ಸಹಾಯದಿಂದ ಪರೀಕ್ಷೆಗೆ ಹಾಜರಾಗಲು ಹಾಗೂ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. 12 ವಾರಗಳ ಪಾಠಗಳನ್ನು ಅಭ್ಯಾಸ ಮಾಡಲು ಈ ವಿದ್ಯಾರ್ಥಿಯ ಬಳಿ ಮೂರೇ ದಿನವಿತ್ತು. ವಿದ್ಯಾರ್ಥಿ ಇದಕ್ಕಾಗಿ ಚಾಟ್‌ಜಿಪಿಟಿಯ ಸಹಾಯವನ್ನು ಪಡೆದುಕೊಂಡಿದ್ದು ತರಗತಿಗಳಲ್ಲಿ ನಡೆದ ಅಧ್ಯಯನಗಳನ್ನೆಲ್ಲಾ ತ್ವರಿತವಾಗಿ ಅರಿತುಕೊಳ್ಳಲು ಹಾಗೂ ಉಪನ್ಯಾಸಕರು ಪಾಠ ಮಾಡಿದ ಅದೇ ಪಾಠಗಳನ್ನು ಕಲಿಯಲು ಚಾಟ್‌ಜಿಪಿಟಿ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.


ಒಟ್ಟಿನಲ್ಲಿ ಚಾಟ್‌ಜಿಪಿಟಿಯ ಸಹಾಯದಿಂದ ಅಧ್ಯಯನ ವಿಷಯಗಳನ್ನು ಮನನ ಮಾಡಿಕೊಂಡಿರುವ ಈ ವಿದ್ಯಾರ್ಥಿ ತಂತ್ರಜ್ಞಾನಕ್ಕೆ ಧನ್ಯವಾದ ತಿಳಿಸಿದ್ದಾರೆ. ಚಾಟ್‌ಜಿಪಿಟಿಯಿಂದ ಈ ವಿದ್ಯಾರ್ಥಿ ಮೂರು ದಿನಗಳಲ್ಲಿ ಮಾರ್ಗದರ್ಶನ ಪಡೆದುಕೊಂಡಿದ್ದು ಇನ್ನಷ್ಟು ಸರಳವಾಗಿ ಕಲಿಯಲು ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.

You may also like

International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ
Just In Sports

ಹೋರಾಡಿ ಸೋತ ರಾಜಸ್ಥಾನ್ (Rajasthan) – ಸತತ ಎರಡನೇ ಜಯ ದಾಖಲಿಸಿದ ಪಂಜಾಬ್ (Punjab)

Guwahati: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಬ್ಯಾಟಿಂಗ್ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್‌ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ