ಉತ್ತರ ಕನ್ನಡ : ಮಾನಸಿಕ ಅಸ್ವಸ್ಥನೊಬ್ಬ ತನ್ನ ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿ ಗ್ರಾಮದಲ್ಲಿ ನಡೆದಿದೆ.

ಮಗ ಭರತ್ ಮೇಸ್ತಾ ಹತ್ಯೆ ಮಾಡಿರುವ ವ್ಯಕ್ತಿ ಎನ್ನಲಾಗಿದ್ದು, ಆತ ಕಳೆದ ಏಳೆಂಟು ವರ್ಷಗಳಿಂದ ಮಾನಸಿಕ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದ. ಇತ್ತೀಚೆಗಷ್ಟೇ ಮನೆಗೆ ಬಂದಿದ್ದ. ಪೂರ್ಣ ಪ್ರಮಾಣದಲ್ಲಿ ಗುಣಮುಖನಾಗದ ಮಗನನ್ನ, ಮನೆಯಿಂದ ಆಚೆ ಬಿಡದೆ, ಮನೆಯಲ್ಲಿಯೇ ಸಮಯಕ್ಕೆ ಸರಿಯಾಗಿ ಮಾತ್ರೆ, ಔಷಧಿ ತೆಗೆದುಕೊಂಡು ವಿಶ್ರಾಂತಿ ಪಡೆಯಲು ಹೇಳುತ್ತಿದ್ದ ಅಪ್ಪನನ್ನು ಮಗ ಹರಿತವಾದ ಅಸ್ತ್ರದಿಂದ ತಲೆಗೆ ಹೊಡೆದು, ಕೊಲೆ ಮಾಡಿದ್ದಾನೆ.
ತನ್ನ ಮಗ ಸಂಪೂರ್ಣ ಗುಣಮುಖನಾಗಿಲ್ಲ. ಹೊರೆಗೆ ಹೋದರೆ ಜನರೊಂದಿಗೆ ಜಗಳ ಮಾಡುತ್ತಾನೆ. ಎಲ್ಲರೂ ಹುಚ್ಚ ಅಂತ ಕರೆಯುತ್ತಾರೆಂದು ತಂದೆ ಮನೆಯಲ್ಲಿಯೇ ಇರುವಂತೆ ಹೇಳಿದ್ದರು. ಆದರೆ, ಪಾಪಿ ಮಗ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ಪಾಂಡುರಂಗ ಮೇಸ್ತಾನನ್ನ ಚಾಕುವಿನಿಂದ ಹಲ್ಲೆ ಮಾಡಿ, ನಂತರ ಗ್ರ್ಯಾಂಡರ್ ಸ್ಟಾಂಡ್ ನಿಂದ ಭೀಕರವಾಗಿ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಕೊಲೆ ಕಂಡು ಇಡೀ ತೊಪ್ಪಲಕೇರಿ ಗ್ರಾಮ ಬೆಚ್ಚಿ ಬಿದ್ದಿದೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಡಿಪ್ಲೊಮಾದಲ್ಲಿ ಕೆಲ ವಿಷಯಗಳು ಉತ್ತೀರ್ಣವಾಗಿಲ್ಲ ಎಂದು ಭರತ್ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಎನ್ನಲಾಗಿದೆ.