Kornersite

Just In Sports

IPL 2023: ಟಿ20 ಲೀಗ್ ನ ಕ್ವಾಲಿಫೈಯರ್ ಪಂದ್ಯಗಳ ದಿನಾಂಕ ಫಿಕ್ಸ್!

ಬಿಸಿಸಿಐ ಶುಕ್ರವಾರ ಟಿ20 ಲೀಗ್ ನ ಕ್ವಾಲಿಫೈಯರ್ ಪಂದ್ಯಗಳ ವೇಳಾ ಪಟ್ಟಿ ಪ್ರಕಟಿಸಿದ್ದು, ಚೆನ್ನೈ ಹಾಗೂ ಅಹಮದಾಬಾದ್‌ ನಲ್ಲಿ ನಡೆಯಲಿವೆ.

ಮೇ 23ರಂದು ಮೊದಲ ಕ್ವಾಲಿಫೈಯರ್‌, ಮೇ 24ರಂದು ಎಲಿಮಿನೇಟರ್‌ ಪಂದ್ಯಗಳು ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೇ 26ರಂದು 2ನೇ ಎಲಿಮಿನೇಟರ್‌, ಮೇ 28ರಂದು ಫೈನಲ್‌ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಮೇ 21ರಂದು ಲೀಗ್‌ ಹಂತ ಮುಕ್ತಾಯಗೊಳ್ಳಲಿದೆ.

ಕಳೆದ ವರ್ಷವೂ 2ನೇ ಕ್ವಾಲಿಫೈಯರ್‌ ಹಾಗೂ ಫೈನಲ್‌ ಪಂದ್ಯಗಳು ಅಹಮದಾಬಾದ್‌ ನಲ್ಲಿಯೇ ನಡೆದಿದ್ದವು. ಮೊದಲ ಕ್ವಾಲಿಫೈಯರ್‌ ಹಾಗೂ ಎಲಿಮಿನೇಟರ್‌ ಪಂದ್ಯಗಳು ಕೋಲ್ಕತಾದಲ್ಲಿ ಆಯೋಜಿಸಲಾಗಿತ್ತು. ಈ ವರ್ಷದ ಉದ್ಘಾಟನಾ ಸಮಾರಂಭ ಹಾಗೂ ಪಂದ್ಯಕ್ಕೂ ಮೋದಿ ಕ್ರೀಡಾಂಗಣವನ್ನೇ ಬಿಸಿಸಿಐ ಆಯ್ಕೆ ಮಾಡಿತ್ತು.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್