Bangalore : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ(Karnataka assembly Election)ಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ಎಲ್ಲ ಪಕ್ಷಗಳು ಗೆಲುವಿನ ಮಂತ್ರ ಪಠಿಸುತ್ತಿವೆ. ಹೀಗಾಗಿ ಸದ್ಯ ಬಿಜೆಪಿ ಸ್ಥಳೀಯ ಉಸ್ತುವಾರಿ, ಹೊರರಾಜ್ಯದಿಂದ ಬಂದಿರುವ ಉಸ್ತುವಾರಿ ಮತ್ತು ವಿಸ್ತಾರಕ ಎಂದು ಪ್ರತಿ ಕ್ಷೇತ್ರಕ್ಕೆ ಮೂರು ರೀತಿಯ ಉಸ್ತುವಾರಿಗಳ ನೇಮಕ ಮಾಡಿದೆ. ಪ್ರತಿ ಕ್ಷೇತ್ರಕ್ಕೆ ಕೂಡ ಹೊರ ರಾಜ್ಯದ ತಲಾ ಒಬ್ಬೊಬ್ಬ ಶಾಸಕ, ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯರಿಗೆ ರಾಜ್ಯದ ಚುನಾವಣಾ ಜವಾಬ್ದಾರಿ ನೀಡಿದೆ.
ಹೊರ ರಾಜ್ಯದ ಉಸ್ತುವಾರಿಗಳ ಜೊತೆ ಸುದೀರ್ಘ ಸಭೆ ನಡೆಸಿರುವ ಅಮಿತ್ ಷಾ. ಹೊರ ರಾಜ್ಯದ ಉಸ್ತುವಾರಿಗಳಿಗೆ ಬೂತ್ ಮಟ್ಟದ ಜವಾಬ್ದಾರಿ ನೀಡಿದ್ದಾರೆ. ಬೂತ್ ಲೆವೆಲ್ ಸ್ಟ್ರಾಟಜಿಸ್ಟ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಣ್ಣ ಸಮುದಾಯದ ಮುಖಂಡರನ್ನ ಸಂಪರ್ಕಿಸುವ ರೀತಿ, ಹೊರ ರಾಜ್ಯದ ಮತದಾರರ ಸಂಪರ್ಕ, ಪೇಜ್ ಪ್ರಮುಖರ ಜೊತೆಗಿನ ಸಮನ್ವಯದ ಬಗ್ಗೆ ಕುರಿತು ಶಾ, ನಿರ್ದೇಶನ ನೀಡಿದ್ದಾರೆ.