ಚಿಕ್ಕೋಡಿ : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಯ ಹಣ ಖರ್ಚು ಮಾಡುತ್ತಿದ್ದು, ಅವರಿಂದ ದುಡ್ಡು ಪಡೆದು ಬಿಜೆಪಿಗೆ (BJP) ಮತ ಚಲಾಯಿಸಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದ್ದಾರೆ.
ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಸವದಿ (Laxman Savadi) ಕಣ್ಣೀರು ಹಾಕಿ ನಾಟಕ ಮಾಡುತ್ತಿದ್ದಾರೆ. ಪಕ್ಷದಿಂದ ಅವರಿಗೆ ಎಲ್ಲವನ್ನುನ್ನೂ ನೀಡಲಾಗಿತ್ತು. ಅವರು ಅಧಿಕಾರ ನೀಡಿದ ಎಲ್ಲರಿಗೂ ಮೋಸ ಮಾಡಿದ್ದಾರೆ. ಬಿ.ಎಲ್ ಸಂತೋಷ್ (BL Santhosh), ಉಮೇಶ್ ಕತ್ತಿಗೂ (Umesh Katti) ಸವದಿ ಮೋಸ ಮಾಡಿದ್ದಾರೆ. ಈ ಚುನಾವಣೆಯ(Election) ಮೂಲಕ ಅವರಿಗೆ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.
ಸವದಿ ನಮ್ಮನ್ನು ತುಂಬಾ ಕೀಳು ಮಟ್ಟದಿಂದ ನೋಡಿದರು. ಇಲ್ಲಿ ಲಕ್ಷ್ಮಣ ಸವದಿ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎದೆ ಉಬ್ಬಿಸಿ ಮಾತನಾಡುತ್ತಿದ್ದ ಸವದಿ ತಮ್ಮ ಕಷ್ಟದ ದಿನಗಳನ್ನು ಮರೆತಿದ್ದಾರೆ. ನಮ್ಮ ತಂದೆ, ತಾಯಿಯು ಕೂಲಿ ಮಾಡಿದ್ದಾರೆ, ನಾವು ನಮ್ಮ ಕಷ್ಟದ ದಿನಗಳನ್ನು ಮರೆತಿಲ್ಲ ಎಂದು ಹೇಳಿದ್ದಾರೆ.