ಗೋಡಂಬಿ ತಿಂದ್ರೆ ಹೀಟ್ ಆಗುತ್ತೆ. ಗರ್ಬಿಣಿಯರು ಗೋಡಂಬಿ ತಿನ್ನಬಹುದಾ..? ಇಲ್ಲವಾ..? ಅನ್ನೋ ಪ್ರಶ್ನೇ ಹಲವರಲ್ಲಿ ಕಾಡ್ತಾ ಇರುತ್ತೆ. ಸೋ ಇಲ್ಲಿದೆ ಇದಕ್ಕೆ ಸರಿಯಾದ ಉತ್ತರ.

ಗರ್ಭದಲ್ಲಿರುವ ಮಗು ಬೆಳೆಯಲು ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಅವಶ್ಯಕತೆ ಇರುತ್ತದೆ. ಗೋಡಂಬಿ ಮೈಕ್ರೋನ್ಯೂಟ್ರಿಯೆಂಟ್ಸ್ ಉತ್ತಮ ಮೂಲ. ಗೋಡಂಬಿ ಕಾರ್ಬೀಹೈಡ್ರೇಟ್ ಮತ್ತು ಫೈಬರ್ ಸಹ ಹೊಂದಿರುತ್ತದೆ. ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುವುದಲ್ಲದೇ ಹೃದ್ರೋಗ ತಡೆಯಲು ನೆರವು ಮಾಡಿಕೊಡುತ್ತೆ.

ಗೋಡಂಬಿ ಬೀಜಗಳಲ್ಲಿ ಕಬ್ಬಿಣದ ಅಂಶ್ ಹೇರಳವಾಗಿ ಸಿಗುತ್ತೆ. ಇದರಿಂದ ಗರ್ಭಿಣಿಯರಿಗೆ ತುಂಬಾನೇ ಸಹಾಯವಾಗುತ್ತದೆ. ಕೆಲ ಗರ್ಭಿಣಿಯರಲ್ಲಿ ಕಾಡುವ ರಕ್ತಾಹೀನತೆಯೂ ನಿವಾರಣೆಯಾಗುತ್ತದೆ. ಇನ್ನು ಗೋಡಂಬಿಯಲ್ಲಿ ವಿಟಮಿನ್ ಕೆ ಕೂಡ ಸಾಕಷ್ಟು ಇರುತ್ತದೆ. ಇದರಿಂದ ರಕ್ತ ಹೆಪ್ಪುಗಟ್ತುವುದಿಲ್ಲ. ಗರ್ಭಾವಸ್ತೆಯಲ್ಲಿ ಗೋಡಂಬಿ ಸೇವನೆ ಮಾಡಿದರೆ ರಕ್ತದೊತ್ತಡವನ್ನು ನಿವಾರಿಸಬಹುದು.

ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಇರುವುದರಿಂದ ಗರ್ಭಾವಸ್ತೆಯಲ್ಲಿ ಮಲಬದ್ದತೆ ನಿವಾರಣೆಯಾಗುತ್ತದೆ. ಇನ್ನು ಮಗುವಿನ ಬೆಳವಣಿಗೆಗೂ ಗೋಡಂಬಿ ಸಹಾಯಮಾಡುತ್ತದೆ. ಅಕಾಲಿಕ ಹೆರಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

