ಬೆಂಗಳೂರಿನ ಸಿಟಿಆರ್ (CTR) ಗೆ ಹೋದ ಅನುಷ್ಕಾ ಹಾಗೂ ವಿರಾಟ್ ಕೋಹ್ಲಿ ಮಸಾಲೆ ದೋಸೆ ತಿನ್ನಲು ಬಂದಿದ್ದರು. ಖುದ್ದು ವಿರಾಟ್ ಕೊಹ್ಲಿಯ ರೆಸ್ಟೋರೆಂಟ್ ಇದೆ. ಒಂದು ಹೋಟೆಲ್ ನ ಮಾಲೀಕ ಈತ. ಆದ್ರೆ ಪತ್ನಿಯ ಜೊತೆ ಸಿಂಪಲ್ ಆಗಿ ಬಂದು ಮಸಾಲೆ ದೋಸೆ ಸವಿದಿರೋದು ಫ್ಯಾನ್ಸ್ ಗಳಿಗೆ ಅಚ್ಚರಿಯ ಜೊತೆಗೆ ಖುಷಿ ಕೂಡ ತಂದು ಕೊಟ್ಟಿದೆ.
ಪ್ರಸ್ತುತ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಆಡುತ್ತಿದ್ದಾರೆ. ಕ್ರಿಕೆಟ್ ಎಷ್ಟು ಮುಖ್ಯವೋ ಅಷ್ಟೇ ಫ್ಯಾಮಿಲಿ ಕೂಡ ಅಷ್ಟೇ ಇಂಪಾರ್ ಟೆಂಟ್ ಎಂದು ಕ್ವಾಲಿಟಿ ಟೈಂ ಕಳೆಯಲು ಹೊಟೆಲ್ ಗೆ ಬಂದಿದ್ದರು. ಇದೇ ವೇಳೆ ಅನುಷ್ಕಾ ಪೋಷಕರು ಹಾಗೂ ಸಂಬಂಧಿಕರು ಜೊತೆಗಿದ್ದರು.
ಸೆಂಟ್ರೆಲ್ ಟಿಫಿನ್ ರೂಂಗೆ ಹೋದ ವಿರುಷ್ಕಾ ದಂಪತಿ ಕೇವಲ ಮಸಾಲೆ ದೋಸೆ ಮಾತ್ರವಲ್ಲ, ಇಡ್ಲಿ, ಸಾಂಬಾರ್ ವಡಾ ಕೂಡ ಸವೆದರು. ಅನುಷ್ಕಾ ತನ್ನ ಕುಟುಂಬದ ಜೊತೆ ಹೊಟೆಲ್ ಗೆ ಹೋಗಿದ್ದ ಫೋಟೋಗಳನ್ನ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಈ ಫೋಟೋಸ್ ಸಖತ್ ವೈರಲ್ ಆಗುತ್ತಿದೆ.
ಅನುಷ್ಕಾ ಸಿಟಿಆರ್ ಮೆನ್ಯೂ ಫೋಟೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮಸಾಲೆ ದೋಸೆ, ಗೋಳಿಬಜೆ ಹಾಗೂ ಕೆಸರಿ ಬಾತ್ ಬೆಲೆ ತೋರಿಸಲಾಗಿದೆ. ವಿರುಷ್ಕಾ ತಿಂದ ಮಸಾಲೆ ದೋಸೆ ಬೆಲೆ 70 ರೂಪಾಯಿ, ಕೇಸರಿಬಾತ್ ಬೆಲೆ 40 ರೂಪಾಯಿ, ಮಂಗಳೂರು ಬಜೆ ಬೆಲೆ 50 ರೂಪಾಯಿ ಇದೆ.