ಕಳೆದ ಹಲವು ದಿನಗಳಿಂದ ತುಗೂಯ್ಯಾಲೆಯಲ್ಲಿರುವ ಚಿನ್ನದ ದರ ಇಂದು ಮತ್ತೆ ಇಳಿಕೆ ಕಂಡಿದೆ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆಯಲ್ಲ 30 ರೂ. ಕಡಿಮೆಯಾಗಿದೆ. ಅಂದರೆ 10 ಗ್ರಾಂನ ಚಿನ್ನದ ಬೆಲೆ 300 ರೂ.ನಷ್ಟು ಕಡಿಮೆಯಾಗಿದೆ. ಹೀಗಾಗಿ 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 55,800 ರೂ. ಇದೆ.

24 ಕ್ಯಾರೆಟ್ ನ ಶುದ್ಧ ಚಿನ್ನದ ಬೆಲೆಯಲ್ಲಿ ಕೂಡ ವ್ಯತ್ಯಾಸವಾಗಿದ್ದು, 24 ಕ್ಯಾರೆಟ್ ನ ಒಂದು ಗ್ರಾಂ ದರದಲ್ಲಿ 31 ರೂ. ಕಡಿಮೆಯಾಗಿದೆ. ಹೀಗಾಗಿ ಇಂದು 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ 60,870 ರೂ. ಆಗಿದೆ.

ಭಾರತದಲ್ಲಿ ಬೆಳ್ಳಿಯ ಬೆಲೆ ಅಂತರರಾಷ್ಟ್ರೀಯ ಬೆಲೆಯಿಂದ ನಿರ್ಧಾರವಾಗುತ್ತದೆ. ಮತ್ತೊಂದೆಡೆ ಇದು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಅವಲಂಬಿತವಾಗಿರುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದರೆ ಅಂತರಾಷ್ಟ್ರೀಯ ಬೆಲೆಗಳು ಸ್ಥಿರವಾಗಿರುತ್ತವೆ. ಆದರೆ ಬೆಳ್ಳಿ ಹೆಚ್ಚು ದುಬಾರಿಯಾಗುತ್ತದೆ. ಕಳೆದ ಕೆಲವು ತಿಂಗಳಲ್ಲಿ ಬೆಲೆಬಾಳುವ ಲೋಹಗಳ ದರಗಳು ಏರಿಳಿತ ಕಂಡಿವೆ. ಬೆಂಗಳೂರಿನಲ್ಲಿ ಕೂಡ ಬೆಳ್ಳಿಯ ಬೆಲೆಗಳ ಮೇಲೆ ಈ ಪರಿಣಾಮ ಬೀರಿದೆ.