ರಿಲಯನ್ಸ್ ಸಂಸ್ಥೆಯ ಉದ್ಯೋಗಿಯೊಬ್ಬರಿಗೆ ಮುಂಬೈನಲ್ಲಿ 1500 ಕೋಟಿಯ ಮನೆಯನ್ನ ಗಿಫ್ಟ್ ಕೊಟ್ತಿದ್ದಾರೆ ಮುಖೇಶ್ ಅಂಬಾನಿ. ಈ ಮನೆ 22 ಅಂತಸ್ತು ಹೊಂದಿದ್ದು, 1.7 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ.
ರಿಲಯನ್ಸ್ ಕಂಪನಿಯ ಉದ್ಯೋಗಿಗಳಿಗೆ ಸಂಬಳ ಚೆನ್ನಾಗಿ ಕೊಟ್ಟು ಉತ್ತಮ ಸೌಲಭ್ಯ ಕೂಡ ಕೊಟ್ಟಿದ್ದಾರೆ. ಇಷ್ಟೇಲ್ಲ ಓದಿದ ಮೇಲೆ ಯಾರಿಗಪ್ಪ ಉಡುಗೊರೆಯಾಗಿ ಮನೆ ಕೊಟ್ತಿದ್ದು. ಯಾರು ಆ ಲಕ್ಕಿ ಮ್ಯಾನ್ ಎಂಬ ಕುತೂಹಲ ಖಂಡಿತ ನಿಮಗೆ ಕಾಡಿರುತ್ತೆ. ಈ ಮನೆ ಗಿಫ್ಟ್ ಕೊಟ್ಟಿದ್ದು ಮನೋಜ್ ಮೋದಿ ಎಂಬ ಉದ್ಯೋಗಿಗೆ.
ಮನೋಜ್ ಮೋದಿ ಅವರನ್ನು ಮುಖೇಶ್ ಅಂಬಾನಿಯವರ ಬಲಗೈ ಬಂಟ ಅಂತಲೂ ಹೇಳಲಾಗುತ್ತದೆ. ಹಲವು ವರ್ಷಗಳಿಂದ ರಿಲಯನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮನೋಜ್ ಮೋದಿ, ಅಂಬಾನಿ ಕುಟುಂಬದ ಸದಸ್ಯರ ಜೊತೆ ಒಡನಾಟ ಚೆನ್ನಾಗಿ ಇದೆ. ಧಿರೂಬಾಯಿ ಅಂಬಾನಿಯವರ ಕಾಲದಿಂದಲೂ ರಿಲಯನ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೆ ಅಲ್ಲ ಮುಖೇಶ್ ಅಂಬಾನಿ ಹಾಗೂ ಮನೋಜ್ ಮೋದಿ ಇಬ್ಬರೂ ಒಂದೇ ಸ್ಕೂಲಿನಲ್ಲಿ ಓದಿದವರು.
ರಿಲಯನ್ಸ್ ಕಂಪನಿಯ ಬೆಳವಣಿಗೆಯಲ್ಲಿ ಮನೋಜ್ ಮೋದಿ ಪಾತ್ರ ಬಹುಮುಖ್ಯ. ರಿಲಯನ್ಸ್ ಕಂಪನಿಗೆ ಒಂದು ರೂಪಾಯಿ ನಷ್ಟ ಆಗದಂತೆ ಹಲವು ವ್ಯವಹಾರಗಳನ್ನ ಕುದುರಿಸಿದ್ದಾರೆ. ಮನೋಜ್ ಮೋದಿ ಸದ್ಯ ರಿಲಯನ್ಸ್ ರಿಟೇಲ್ ಹಾಗೂ ರಿಲಯನ್ಸ್ ಜಿಯೋ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮನೋಜ್ ಮೋದಿ ಅವರ 22 ಅಂತಸ್ತಿನ ಮನೆಯಲ್ಲಿ 19 ರಿಂದ 21 ನೇ ಅಂತಸ್ತನ್ನು ಪೆಂಟ್ ಹೌಸ್ ಆಗಿ ಪರಿವರ್ತಿಸಲಾಗಿದೆ. ಇದರಲ್ಲಿ ಮನೋಜ್ ಮೋದಿ ಅವರ ಕುಟುಂಬದ ಸದಸ್ಯರು ವಾಸಿಸಲಿದ್ದಾರೆ. ಇನ್ನು 16, 17 ಹಾಗೂ 18 ನೇ ಅಂತಸಿನಲ್ಲಿ ಮನೋಜ್ ಅವರ ಹಿರಿಯ ಪುತ್ರಿ ಹಾಗೂ ಆಕೆಯ ಕುಟುಂಬದ ಸದಸ್ಯರು ವಾಸಿಸಲಿದ್ದಾರೆ. ಮುಖೇಶ್ ಅಂಬಾನಿ ನೀಡಿರುವ ಈ ಮನೆಯ ಫರ್ನಿಚರ್ ಗಳು ಇಟಲಿಯಿಂದ ತರೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.