Bangalore : ಚಿನಿವಾರ ಮಾರುಕಟ್ಟೆಗಳಲ್ಲಿ (Bullion Market) ಬಂಗಾರ ಹಾಗೂ ಬೆಳ್ಳಿಯ ದರದಲ್ಲಿ ಏರಿಳಿತ ಕಂಡು ಬರುತ್ತಿದೆ. ಭಾರತದಲ್ಲಿ ಆಭರಣ ಚಿನ್ನದ ಬೆಲೆ 56 ಸಾವಿರ ರೂ. ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಅಪರಂಜಿ ಚಿನ್ನವೂ 61 ಸಾವಿರ ರೂ. ಮಟ್ಟಕ್ಕಿಂತ ಕೆಳಗಿಳಿದಿದೆ.

ಬೆಳ್ಳಿ ಬೆಲೆಯಲ್ಲಿಯೂ (Silver Price) ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,750 ರುಪಾಯಿ ಆಗಿದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 60,820 ರುಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,690 ರೂ. ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಗೆ 55,800 ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 8,040 ರೂ. ಇದೆ.

ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಹೊಸ ದಾಖಲೆ ಮಟ್ಟಕ್ಕೆ ಏರುವ ಸಾಧ್ಯತೆ ಇದೆ. ವರ್ಷದಲ್ಲಿ 24 ಕ್ಯಾರಟ್ ನ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಭಾರತದಲ್ಲಿ 70 ಸಾವಿರ ರೂ. ಮಟ್ಟಕ್ಕೆ ಹೋಗಬಹುದು.
ಭಾರತದಲ್ಲಿ ಚಿನ್ನದ ಬೆಲೆ ಈ ರೀತಿ ಇದೆ…
• 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 55,750 ರೂ
• 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 60,820 ರೂ
• ಬೆಳ್ಳಿ ಬೆಲೆ 10 ಗ್ರಾಂಗೆ: 769 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
• ಮಲೇಷ್ಯಾ: 2,840 ರಿಂಗಿಟ್ (52,500 ರುಪಾಯಿ)
• ದುಬೈ: 2225 ಡಿರಾಮ್ (49,708 ರುಪಾಯಿ)
• ಅಮೆರಿಕ: 610 ಡಾಲರ್ (50,044 ರುಪಾಯಿ)
• ಸಿಂಗಾಪುರ: 824 ಸಿಂಗಾಪುರ್ ಡಾಲರ್ (50,634 ರುಪಾಯಿ)
• ಕತಾರ್: 2,290 ಕತಾರಿ ರಿಯಾಲ್ (51,606 ರೂ)
• ಓಮನ್: 242.50 ಒಮಾನಿ ರಿಯಾಲ್ (51,675 ರುಪಾಯಿ)
• ಕುವೇತ್: 190 ಕುವೇತಿ ದಿನಾರ್ (50,869 ರುಪಾಯಿ)