ದಿನದಿಂದ ದಿನಕ್ಕೆ ಬಿಸಿಲು (Summer) ಹೆಚ್ಚಾಗ್ತಾನೇ ಇದೆ. ನೀರು ಕುಡದ್ರು ಸಮಾಧಾನ ಆಗಲ್ಲ. ಈ ಬಿಸಿಲಿಗಂತೂ ಊಟವೂ ಸೇರಲ್ಲ್. ಬೇಸಿಗೆಯಲ್ಲಿ ಸಿಗುವ ತಾಳೆಹಣ್ಣು(Ice apple) ದೇಹಕ್ಕೆ ಎಷ್ಟು ಲಾಭ. ಅಲ್ಲದೇ ಸಣ್ಣ ಆಗಲು ಕೂಡ ಈ ಹಣ್ಣು ಸಹಾಯ ಮಾಡುತ್ತದೆ.

ಬೆಸಿಗೆಯಲ್ಲಿ ಸಿಗುವ ಹಣ್ಣು ಅಂದರೆ ಮೊದಲಿಗೆ ನೆನಪಾಗೋದು ಕಲ್ಲಂಗಡಿ ಹಾಗೂ ಕರಬೂಜ ಹಣ್ನೂ. ಈ ಹಣ್ಣುಗಳು ದೇಹವನ್ನ ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತವೆ. ಆದರೆ ಹೆಚ್ಚು ಜನಕ್ಕೆ ತಾಳೆ ಹಣ್ಣಿನ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ. ಬೆಸಿಗೆಯಲ್ಲಿ ಹಲವೆಡೆ ತಾಳೆಹಣ್ಣನ್ನ ಮಾರುವುದನ್ನ ನೋಡಿರುತ್ತೇವೆ. ಆದರೆ ಈ ಹಣ್ಣಿನಿಂದಾಗುವ ಪ್ರಯೋಜನೆಯ ಬಗ್ಗೆ ಮಾತ್ರ ಗೊತ್ತಿರಲ್ಲ. ದೇಹದ ನೀರಿನ ಅಂಶ ಕಾಪಾಡಲು ಸಹಾಯ ಮಾಡುತ್ತದೆ. ತಾಳೆ ಹಣ್ಣಿನಲ್ಲಿ ವಿಟಾಮಿನ್ ಬಿ, ಕಬ್ಬಿಣ, ಪೊಟ್ಯಾಶಿಯಂ, ರಂಜಕ ಮತ್ತು ಕ್ಯಾಲ್ಸಿಯಮ್ ನಂತಹ ಪೋಷಕಾಂಶಗಳು ಹೇರಳವಾಗಿ ಸಿಗುತ್ತವೆ. ಕಡಿಮೆ ಕ್ಯಾಲೋರಿ ಇರುವ ತಾಳೆಹಣ್ಣಿನಲ್ಲಿ ಫೈಬರ್, ಪ್ರೋಟೀನ್ ಮತ್ತು ವಿಟಾಮಿಸ್ ಸಿ, ಎ, ಇ ಹಾಗೂ ಕೆ ಕೂಡ ಇದೆ. ಈ ಹಣ್ಣಿಗೆ ಐಸ್ ಆಪಲ್ ಅಂತಲೂ ಕರೆಯುತ್ತಾರೆ.

ತೂಕ ಇಳಿಸಲು ಸಹಾಯಕಾರಿ
ಬೆಸಿಗೆಯಲ್ಲಿ ತಾಳೆಹಣ್ಣನ್ನ ತಿಂದರೆ ದೇಹದ ತೂಕವನ್ನ ಸುಲಭವಾಗಿ ಇಳಿಸಬಹುದು. ತಾಳೆಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಮತ್ತು ಅಧಿಕ ನೀರಿನಾಂಶ ಇರುವುದರಿಂದ ಇದನ್ನು ತಿಂದರೆ ತುಂಬಾ ಹೊತ್ತಿನವರೆಗೂ ಹಸಿವಾಗುವುದಿಲ್ಲ. ಈ ಹಣ್ಣಿನಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ. ಇದರಿಂದ ತೂಕ ಇಳಿಸೋಕೆ ಈಸೀಯಾಗುತ್ತದೆ.
ಮಧುಮೇಹ ನಿಯಂತ್ರಣಕ್ಕೆ ಸಹಾಯಕಾರಿ
ತಾಳೆಹಣ್ಣಿನಲ್ಲಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಇರುವ ಕಾರಣ ಇದು ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ಸಹಾಯ ಮಾಡುತ್ತದೆ. ಮಧುಮೇಹಿಗಳು ಈ ಹಣ್ಣನ್ನು ತಿನ್ನುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು.