ಕರುವಿನ ಮೇಲೆ ಹುಲಿಯೊಂದು ದಾಳಿ ಮಾಡುವ ವೀಡಿಯೊ ವೈರಲ್ ಆಗಿದೆ. ಭಾರತದಲ್ಲಿ ಹುಲಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವುದು ಹೆಚ್ಚಾಗುತ್ತಿದೆ. ಹೀಗಾಗಿ ಜನ- ಜಾನುವಾರುಗಳಿಗೆ ಅಪಾಯ ಹೆಚ್ಚಾಗುತ್ತಿದೆ.
ಈ ವೀಡಿಯೊವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಹುಲಿಯೊಂದು ಕರುವನ್ನು ಬೆನ್ನಟ್ಟಿಸಿಕೊಂಡು ಹೋಗಿ ದಾಳಿ ಮಾಡಿದೆ. ಎಲ್ಲರನ್ನೂ ಒಂದು ಬಾರಿ ತಲ್ಲಣಗೊಳಿಸಿದೆ. ಆಗ ತಮ್ಮ ಪುಟ್ಟ ಕಂದನನ್ನು ಕಾಪಾಡಲು ತಾಯಿಹಸು ಮುಂದಾಗುತ್ತದೆ. ತಕ್ಷಣ ಕೋಪದಲ್ಲಿ ಹಸು ಕರುವನ್ನು ಕಾಪಾಡಲು ತನ್ನ ಕೊಂಬಿನ ಮೂಲಕ ಹುಲಿಯ ಮೇಲೆ ಪ್ರತಿದಾಳಿ ಮಾಡಿ ಅಲ್ಲಿಂದ ಓಡಿಸಿದೆ. ಸದ್ಯ ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ.
ವಿಶ್ವದ 75% (ಸುಮಾರು 3200) ರಷ್ಟು ಕಾಡು ಹುಲಿಗಳನ್ನು ಭಾರತ ಹೊಂದಿದೆ. ಇದೀಗ ಹುಲಿಗಳು ಮಾನವನ ಮೇಲೆ ದಾಳಿ ಮಾಡುತ್ತಿದೆ. ಇದರ ಜತೆಗೆ ಸಾಕು ಪ್ರಾಣಿಗಳಿಗೂ ಸಂಕಷ್ಟವನ್ನು ಉಂಟು ಮಾಡುತ್ತಿದೆ ಎಂದು ಟ್ವಿಟರ್ನಲ್ಲಿ ನಂದಾ ಬರೆದಿದ್ದಾರೆ. ಶನಿವಾರ ಹಂಚಿಕೊಂಡ ಈ ವೀಡಿಯೊ Twitter ನಲ್ಲಿ 33,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಆದರೆ ಈ ಘಟನೆ ಎಲ್ಲಿ ನಡೆದದ್ದು ಎಂದು ತಿಳಿಸಲಿಲ್ಲ.