ಸೀರೆ ಖರೀದಿಸಲು ಹೋಗಿ ಮಹಿಳೆಯರು ಜುಟ್ಟು ಹಿಡಿದು ಬಡಿದಾಡಿಕೊಂಡಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.

ಮಲ್ಲೇಶ್ವರಂನಲ್ಲಿನ (Malleshwaram) ಕೆನರಾ ಯೂನಿಯನ್ ಹಾಲ್ನಲ್ಲಿ ಮೈಸೂರು ಸಿಲ್ಕ್ ಸೀರೆಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು (annual discount sale).
ಹಿಂಡು ಹಿಂಡಾಗಿ ಬಂದ ಹೆಂಗೆಳೆಯರು ನಾಮುಂದು ತಾಮುಂದು ಎಂದು ಸೀರೆಗಳನ್ನು ಬಾಚಿಕೊಳ್ಳಲು ಮುಂದಾಗಿದ್ದಾರೆ. ಸಂದರ್ಭದಲ್ಲಿ ಮಹಿಳೆಯರ ಮಧ್ಯೆ ಜಗಳ ನಡೆದು, ಇಬ್ಬರು ಮಹಿಳೆಯರು ಸೀದಾ ಪರಸ್ಪರ ಜುಟ್ಟು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಎಳೆದಾಡಿ ಕೆಳಗೆ ಬೀಳುವ ಹಂತಕ್ಕೂ ಅವರಿಬ್ಬರ ಮಧ್ಯೆ ಗಲಾಟೆ ನಡೆದಿದೆ. ಈ ಮಧ್ಯೆ ಸ್ಥಳಲ್ಲಿದ್ದ ಸೆಕ್ಯುರಿಟಿಯವರೂ ಜಗಳ ಬಿಡಿಸಲು ಧಾವಿಸಿದ್ದಾರೆ. ಆದರೆ ಫೈಟ್ ಜೋರಾಗಿದ್ದ ಕಾರಣ ಮಹಿಳೆಯರು ಸುಮ್ಮನೆ ನೋಡಿದ್ದಾರೆ.
ಇನ್ನು ಕೆಲವರು ದೂರದಿಂದ ನೋಡಿ, ತಮಗೂ, ಫೈಟ್ಗೂ ಸಂಬಂಧವೇನೂ ಇಲ್ಲ ಎಂಬಂತೆ ಸುಮ್ಮನಾಗಿ, ಸೀರೆ ಸೆಲೆಕ್ಷನ್ನಲ್ಲಿ ತಲ್ಲೀನರಾಗಿದ್ದಾರೆ.