Kornersite

International Just In

BTS Jimin: ಕೊರಿಯಾದ ಸಿಂಗರ್ ಜೆಮಿನಿ ರೀತಿ ಕಾಣಲು 12 ಬಾರಿ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದ ಯುವಕ; ಮುಂದೇನಾಯ್ತು?

ಕೊರಿಯಾದ ಖ್ಯಾತ ಸಿಂಗರ್ ಜಿಮಿನ್ (BTS Jimin)ಯಂತೆ ಕಾಣಬೇಕು ಎಂದು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದ ನಟ, ಸದ್ಯ ಸಾವನ್ನಪ್ಪಿದ್ದಾರೆ. ಸಂಗೀತ ಲೋಕದಲ್ಲಿ ಸಾಧನೆ ಮಾಡಬೇಕು ಎಂದು ಹಗಲಿರುಳು ಕನುಸು ಕಂಡಿದ್ದ ಯುವಕ, ಈಗ ಕಣ್ಮರೆಯಾಗಿದ್ದಾನೆ.

ಈ ಯುವಕ ಕೊರಿಯಾದ ಪ್ರಸಿದ್ಧ ಬಿಟಿಎಸ್ ಬ್ಯಾಂಡ್‌ನ ಸದಸ್ಯ ಜಿಮಿನ್ (Jimin)ಯ್ನು ತುಂಬಾ ಇಷ್ಟಪಡುತ್ತಿದ್ದ. ಅವನಂತೆಯೇ ಕಾಣಿಸಬೇಕು ಎಂದು ಬಯಸಿದ್ದ. 22 ವರ್ಷದ ಕೆನಡಿಯನ್ ನಟ ಸೇಂಟ್ ವಾನ್ ಕೊಲುಸಿ ಸಾವನ್ನಪ್ಪಿದ ದುರ್ದೈವಿ.

ಈ ನಟ ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಯುವನಟನ ಸಾವಿಗೆ ಪ್ಲಾಸ್ಟಿಕ್ ಸರ್ಜರಿಯೇ ಕಾರಣ ಎನ್ನಲಾಗಿದೆ. ಈ ನಟ, 12 ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತ ಸೇಂಟ್ ವಾನ್ ಕೊಲುಸಿ (Saint Von Colucci) ಒಟ್ಟು 12 ಬಾರಿ ಪ್ಲಾಸ್ಟಿಕ್ ಸರ್ಜರಿಗಾಗಿ 220,000 ಡಾಲರ್ ಅಂದರೆ 1,80,22,180 (ಭಾರತೀಯ ರೂಪಾಯಿ) ಖರ್ಚು ಮಾಡಿದ್ದರು ಎನ್ನಲಾಗಿದೆ.

You may also like

International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ