Hyderabad : ಬೌಲರ್ ಗಳ ಅತ್ಯುತ್ತಮ ಪ್ರದರ್ಶನದಿಂದಾಗಿ ಡೆಲ್ಲಿ ಕ್ಯಾಪಿಟಲ್ ತಂಡವು (Delhi Capitals) ಹೈದರಾಬಾದ್ ಸನ್ ರೈಸರ್ಸ್ (Sunrisers Hyderabad) ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 144 ರನ್ ಗಳಿಸಿತು. ಈ ಸುಲಭ ರನ್ ಬೆನ್ನಟ್ಟಿದ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳನ್ನು ಮಾತ್ರ ಗಳಿಸಿ ಸೋಲು ಅನುಭವಿಸಿತು. ಐಪಿಎಲ್ (IPL) ಅಂಕಪಟ್ಟಿಯಲ್ಲಿ 7 ಪಂದ್ಯ ಆಡಿ 2 ರಲ್ಲಿ ಜಯಗಳಿಸಿರುವ ಡೆಲ್ಲಿ 4 ಅಂಕ ಪಡೆದು 10ನೇ ಸ್ಥಾನದಲ್ಲಿಯೇ ಉಳಿದರೆ, ಹೈದರಾಬಾದ್ 2 ಪಂದ್ಯಗಳನ್ನು ಜಯ ಸಾಧಿಸಿ 4 ಅಂಕ ಪಡೆದು 9ನೇ ಸ್ಥಾನದಲ್ಲಿದೆ.
ಕೊನೆಯ 30 ಎಸೆತಗಳಲ್ಲಿ ಹೈದರಾಬಾದ್ ತಂಡಕ್ಕೆ 51 ರನ್ ಗಳ ಅಗತ್ಯವಿತ್ತು. 17ನೇ ಓವರ್ ನಲ್ಲಿ 13 ರನ್ ನೀಡರೆ, 18ನೇ ಓವರ್ ನಲ್ಲಿ 15 ರನ್ ಗಳಿಸಿತ್ತು. 19ನೇ ಓವರ್ ನಲ್ಲಿ10 ರನ್ ಗಳಿಸಿದರೂ ಹೆನ್ರಿಕ್ ಕ್ಲಾಸೆನ್ ಔಟಾದ ಪರಿಣಾಮ ಪಂದ್ಯ ರೋಚಕ ಘಟ್ಟಕ್ಕೆ ತಿರುಗಿತು.
ಕೊನೆಯ ಓವರ್‌ನಲ್ಲಿ 13 ರನ್‌ಗಳ ಅಗತ್ಯವಿತ್ತು. ಮುಕೇಶ್ ಕುಮಾರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಕೇವಲ 5 ರನ್ ಬಿಟ್ಟುಕೊಡುವ ಮೂಲಕ ಡೆಲ್ಲಿ ತಂಡಕ್ಕೆ ಜಯ ತಂದರು.
ಮಯಾಂಕ್ ಅಗರ್‌ವಾಲ್ 49 ರನ್ (39 ಎಸೆತ, 7 ಬೌಂಡರಿ), ಹೆನ್ರಿಕ್ ಕ್ಲಾಸೆನ್ 31 ರನ್ (19 ಎಸೆತ, 3 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು. ವಾಷಿಂಗ್ಟನ್ ಸುಂದರ್ ಔಟಾಗದೇ 24 ರನ್(15 ಎಸೆತ, 3 ಬೌಂಡರಿ) ಹೊಡೆದರು. ಅಕ್ಷರ್ ಪಟೇಲ್ ಮತ್ತು ಅನ್ರಿಚ್ ನೋರ್ಕಿಯ ತಲಾ 2 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ, ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ಡೇವಿಡ್ ವಾರ್ನರ್ 21 ರನ್, ಮಿಷೆಲ್ ಮಾರ್ಷ್ 25 ರನ್(15 ಎಸೆತ, 5 ಬೌಂಡರಿ), ಮನೀಷ್ ಪಾಂಡ 34 ರನ್(27 ಎಸೆತ), ಅಕ್ಷರ್ ಪಟೇಲ್ 34 ರನ್ (34 ಎಸೆತ, 4 ಬೌಂಡರಿ) ಹೊಡೆದು ಔಟಾದರು.