Ahmedabad : ಭರ್ಜರಿ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಉತ್ತಮ ಪ್ರದರ್ಶನದಿಂದಾಗಿ ಮುಂಬಯಿ ಇಂಡಿಯನ್ಸ್ ತಂಡವು (Mumbai Indians) ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ 55 ರನ್ ಗಳ ಹೀನಾಯ ಸೋಲು ಕಂಡಿದೆ.

ಗುಜರಾತ್ ತಂಡವು 6 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತ್ತು. ಬೃಹತ್ ಸವಾಲಿನ ಮೊತ್ತ ಬೆನ್ನಟ್ಟಿದ ಮುಂಬಯಿ ತಂಡವು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 152 ರನ್ ಗಳಿಸಿ ಸೋಲು ಅನುಭವಿಸಿತು. ನಾಯಕ ರೋಹಿತ್ ಶರ್ಮಾ (Rohith Sharma) ಬೇಗೆ ಔಟ್ ಆಗಿ ಫೆವಲಿಯನ್ ಸೇರಿಕೊಂಡರು. ಅಲ್ಲದೇ, ಮುಂಬಯಿ ತಂಡವು 59 ರನ್ ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ಕ್ಯಾಮರೂನ್ ಗ್ರೀನ್ 33 ರನ್, ಸೂರ್ಯಕುಮಾರ್ ಯಾದವ್ 23 ರನ್, ನೆಹಾಲ್ ವಧೇರಾ 40 ರನ್, ಸಿಡಿಸಿ ಸ್ವಲ್ಪ ಪ್ರತಿರೋಧ ತೋರಿದರು. ಗುಜರಾತ್ ಪರ ನೂರ್ ಅಹ್ಮದ್ 3 , ರಶೀದ್ ಖಾನ್ ಮತ್ತು ಮೋಹಿತ್ ಶರ್ಮಾ ತಲಾ 2, ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದರು.

ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ 12 ರನ್ ಗಳಿಸುವಷ್ಟರಲ್ಲಿಯೇ ಮೊದಲ ವಿಕೆಟ್ ಕಳೆದುಕೊಂಡಿತ್ತು. ಶುಭಮನ್ ಗಿಲ್ ಸ್ಫೋಟಕ 56 ರನ್ ಸಿಡಿಸಿ ಔಟಾದರು. ಡೇವಿಡ್ ಮಿಲ್ಲರ್ 22 ಎಸೆತ ಎದುರಿಸಿ 46 ರನ್, ಅಭಿನವ್ ಮನೋಹರ್ 21 ಎಸೆತಗಳಲ್ಲಿ 42 ರನ್ ಸಿಡಿಸಿದರು. ಇನ್ನು ರಾಹುಲ್ ತೆವಾಟಿಯಾ ಕೇವಲ 5 ಎಸೆತಗಳಲ್ಲಿ ಔಟಾಗದೇ 20 ರನ್ ಗಳಿಸಿದರು. ಪರಿಮಾಮ ತಂಡದ ಮೊತ್ತ 200ರ ಗಡಿ ದಾಟಿತು.