ಬೆಂಗಳೂರಿನಲ್ಲಿ ಬಾಡಿಗೆ ಕೊಡುವ ಮನೆಯ ಮಾಲೀಕರಿಗೆ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿ ತಮ್ಮ ಪರಿಸ್ಥಿತಿ ತೋರಿಸುವುದರ ಮೂಲಕ ಜಾಗೃತಿ ಮೂಡಿಸಿದ್ದಾರೆ.

ಮದುವೆಯಾಗದಿದ್ದರೆ ಬೆಂಗಳೂರಿನಲ್ಲಿ ಮನೆ ಸಿಗುವುದು ಕೂಡ ಅಷ್ಟೊಂದು ಸುಲಭವಲ್ಲ. ಅಂತಹುದರಲ್ಲಿ ಸಿಕ್ಕರೂ ಆ ಮನೆಯ ಪರಿಸ್ಥಿತಿ ಹೇಳತೀರದು. ಹೀಗೆ ಪಜೀತಿ ಅನುಭವಿಸಿದ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಬ್ಯಾಚುಲರ್ಸ್ ಮನೆ ಖಾಲಿ ಮಾಡಿ ಹೋದ ನಂತರ ಫೋಟೋಗಳನ್ನು ಮಾಲೀಕರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. 2 ಬಿಎಚ್ಕೆ ಫ್ಲಾಟ್ ಅನ್ನು ಎಮ್ಎನಿಸಿ ಕಂಪನಿಯಲ್ಲಿ ಕೆಲಸ ಮಾಡುವ ಬ್ಯಾಚುಲರ್ಗೆ ಬಾಡಿಗೆ ನೀಡಿದ್ದರಂತೆ. 4 ತಿಂಗಳು ಬಾಡಿಗೆ ಕಟ್ಟುಕೊಂಡು ಆ ಯುವಕ ಅಲ್ಲಿಯೇ ಇದ್ದ. ಆದರೆ, ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾನೆ. ಅಡ್ವಾನ್ಸ್ ಹಣ ಹಿಂದಿರುಗಿಸಲು ಬಂದ ಮಾಲೀಕನಿಗೆ ಬಿಗ್ ಶಾಕ್ ಎದುರಾಗಿದೆ. ಮನೆ ತುಂಬೆಲ್ಲಾ ಬಿಯರ್ ಬಾಟಲ್ಗಳು. ಕೊಳಕು ಬೆಡ್, ಮನೆ ತುಂಬೆಲ್ಲಾ ಬರೀ ಬಿಯರ್ ಬಾಟಲ್ಗಳೇ ತುಂಬಿ ಹೋಗಿತ್ತಂತೆ.

ಮನೆ ಬಾಡಿಗೆಗೆ ಬಂದಾಗಿನಿಂದಲೂ ಈ ಯುವಕ ಮನೆಯನ್ನೇ ಸ್ವಚ್ಛಗೊಳಿಸಲ್ಲವಂತೆ. ಕೇವಲ ಕುಡಿಯಲು ಮಾತ್ರ ಈ ಮನೆ ಬಳಕೆ ಮಾಡಿದ್ದಾನೆ ಎನ್ನಲಾಗಿದೆ. ಇಡೀ ಜಾಗ ಖಾಲಿ ಮದ್ಯದ ಬಾಟಲಿಗಳಿಂದ ತುಂಬಿತ್ತು. ಕಿಟಕಿಗಳು ತೆರೆದಿದ್ದರಿಂದ ಪಾರಿವಾಳಗಳು ಎಲ್ಲೆಂದರಲ್ಲಿ ಬಂದು ಮಲವಿಸರ್ಜನೆ ಮಾಡಿವೆ. ಮನೆ ಗಬ್ಬು ನಾರುತ್ತಿತ್ತಂತೆ. ಈ ಕಾರಣಕ್ಕಾಗಿಯೇ ಬ್ಯಾಚುಲರ್ ಗಳಿಗೆ ಮನೆ ಬಾಡಿಗೆ ಕೊಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.