Kornersite

Just In Sports

IPL 2023: ನವಜಾತ ಮಗು ನೋಡಲು ಆಗುತ್ತಿಲ್ಲ ಎಂದು ಭಾವುಕರಾದ ಚಕ್ರವರ್ತಿ!

Bangalore : ಐಪಿಎಲ್ ನ ಪ್ರಸಕ್ತ ಟೂರ್ನಿಯಲ್ಲಿ ನಿನ್ನೆ ಚಿನ್ನದಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ ಸಿಬಿ (RCB) ಹಾಗೂ ಕೆಕೆಆರ್ (KKR) ಪಂದ್ಯದಲ್ಲಿ ವರುಣ್ ಚಕ್ರವರ್ತಿ (Varun Chakravarthy) ಉತ್ತಮ ಪ್ರದರ್ಶನ ನೀಡಿದ್ದರು. ಸಹಜವಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ (Player of the Match) ಲಭಿಸಿತು. ಈ ಪ್ರಶಸ್ತಿಯನ್ನು ಪತ್ನಿ ಹಾಗೂ ನವಜಾತ ಮಗನಿಗೆ ಅರ್ಪಿಸಿದ್ದಾರೆ.

ಪಂದ್ಯ ಮುಗಿದ ನಂತರ ಅವರನ್ನು ಹರ್ಷ ಬೋಗ್ಲೆ ಮಾತನಾಡಿಸಿದರು. ಈ ಸಂದರ್ಭದಲ್ಲಿ ಐಪಿಎಲ್ ಮುಗಿದ ಬಳಿಕ ಮಗನನ್ನು ನೋಡುವುದಾಗಿ ಹೇಳಿ ಭಾವುಕರಾದರು. ವರುಣ್ 4 ಓವರ್‌ ನಲ್ಲಿ 27 ರನ್ ನೀಡಿ 3 ವಿಕೆಟ್‍ಗ ಳನ್ನು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವರುಣ್ ಅವರನ್ನು ಸಂದರ್ಶಿದ ಹರ್ಷ ಬೋಗ್ಲೆ ಕೊನೆಗೆ ಐಪಿಎಲ್ ನಡುವೆ ಚಕ್ರವರ್ತಿಯವರಿಗೆ ಮಗನನ್ನು ನೋಡಲು ಅವಕಾಶ ನೀಡುವಂತೆ ಕೆಕೆಆರ್ ಸಿಇಒ ವೆಂಕ್ ಮೈಸೂರ್ ಅವರಿಗೆ ಮನವಿ ಮಾಡಿಕೊಂಡರು.

4 ಪಂದ್ಯಗಳನ್ನು ಸೋತಿದ್ದ ಕೆಕೆಆರ್ ಈ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧ ತಾನು ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವುದು ವಿಶೇಷ.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್