ಬೆಂಗಳೂರು : ಚೀನಿವಾರ ಮಾರುಕಟ್ಟೆ (Bullion Market)ಯಲ್ಲಿ ಚಿನ್ನದ ಬೆಲೆಯ ಏರಿಕೆಯ ನಾಗಾಲೋಟ ಮುಂದುವರಿದಿದೆ.

ನಿರಂತರವಾಗಿ ಇಳಿಯುತ್ತಿದ್ದ ಚಿನ್ನ ಮತ್ತು ಬೆಳ್ಳಿಗೆ ಮತ್ತೆ ಬೇಡಿಕೆ ಬಂದಿದೆ. ಏ. 27ರಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸದ್ಯ ದೇಶದಲ್ಲಿ 10 ಗ್ರಾಂ ಚಿನ್ನದ ಬೆಲೆ (22 ಕ್ಯಾರಟ್) 56 ಸಾವಿರ ರೂ.ಗೆ ಬಂದು ನಿಂತಿದ್ದು, 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,950 ರೂ. ಆಗಿದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 61,040 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,650 ರೂ.ಗೆ ಇದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 56 ಸಾವಿರ ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 8,020 ರೂ. ಇದೆ.
ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏ. 27ಕ್ಕೆ):
22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 55,950 ರೂ
24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 61,040 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ):
ಮಲೇಷ್ಯಾ: 2,850 ರಿಂಗಿಟ್ (52,345 ರೂ.)
ದುಬೈ: 2242.50 ಡಿರಾಮ್ (49,920 ರೂ.)
ಅಮೆರಿಕ: 610 ಡಾಲರ್ (49,966 ರೂ.)
ಸಿಂಗಾಪುರ: 831 ಸಿಂಗಾಪುರ್ ಡಾಲರ್ (50,954 ರೂ.)
ಕತಾರ್: 2,300 ಕತಾರಿ ರಿಯಾಲ್ (51,637 ರೂ.)
ಓಮನ್: 243.50 ಒಮಾನಿ ರಿಯಾಲ್ (51,673 ರೂ.)
ಕುವೇತ್: 190 ಕುವೇತಿ ದಿನಾರ್ (50,733 ರೂ.)