Uttarakhand : ಸಫಾರಿ ಹೋದ ಸಂದರ್ಭದಲ್ಲಿ ಅದು ದಾಳಿ ಮಾಡಿರುವ ಘಟನೆ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.
ಹುಲಿಯೊಂದು ಪ್ರವಾಸಿಗರ ವಾಹನದ ಮೇಲೆ ಎಗರಿರುವ ವೀಡಿಯೋವನ್ನು ಐಎಫ್‌ಎಸ್ ಅಧಿಕಾರಿ ವಿಡಿಯೋ ಹಂಚಿಕೊಂಡಿದ್ದಾರೆ. ಸನ್ಯಾಸಿ ಕಿರಿಕಿರಿಗೊಂಡಿದ್ದಾರೆ. ಪ್ರತಿ ದಿನ ಗೊತ್ತುಪಡಿಸಿದ ಸಮಯದಲ್ಲಿ ಜನರು ನಿಮ್ಮ ಮನೆಗೆ ನುಗ್ಗಿದರೆ ನೀವು ಏನು ಮಾಡುತ್ತೀರಿ?” ಎಂದು ಬರೆದುಕೊಂಡಿದ್ದಾರೆ.
ಹುಲಿ ಪೊದೆಗಳ ಹಿಂದೆ ಅಡಗಿಕೊಂಡಿರುತ್ತದೆ. ಸಪಾರಿ ವಾಹನ ನೋಡುತ್ತಿದಂತೆ ಹುಲಿ ಜೋರಾಗಿ ಘರ್ಜಿಸಿದೆ. ಆಗ ವಾಹನದ ಬಳಿ ಬರುವಾಗ ಪ್ರವಾಸಿಗರು ಕಂಗಾಲಾಗಿ ಚೀರಿಕೊಂಡಿದ್ದಾರೆ. ಸಫಾರಿ ವಾಹನದ ಚಾಲಕ ಸ್ಮಾರ್ಟ್ ಆಗಿ ವಾಹನ ಚಲಾಯಿಸಿಕೊಂಡು ಬಂದಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು.
ನೆಟ್ಟಿಗರು ಈ ವಿಡಿಯೋಗೆ ಕೆಮೆಂಟ್ ಮಾಡಿದ್ದು, ಪ್ರವಾಸಿಗರು ಸಫಾರಿಗೆ ಹೋಗುವುದನ್ನು ತಡೆಯಬೇಕು. ಕಾಡಿನಲ್ಲಿರುವ ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.