ಅಯ್ಯೋ ಒಬ್ಬ ಹೆಂಡ್ತಿನೇ ಸುಧಾರಿಸೋದೇ ಕಷ್ಟ್, ಅಂತದ್ದರಲ್ಲಿ 6 ಜನಾನಾ..! ಹೀಗೆ ಅನ್ನಿಸೋದು ಎಲ್ಲರಿಗೂ ಕಾಮನ್. ಹೇಗಪ್ಪ 6 ಹೆಂಡ್ತಿರನ್ನ ಮೆಂಟೇನ್ ಮಾಡ್ತಾನೆ ಇವ್ನು. ಭಲೇ ಭೂಪ ಅಂತ ಅಂದುಕೊಳ್ತಾ ಇದ್ದೀರಾ..
ಈಗಿನ ಮಾಡರ್ನ್ ದುನಿಯಾದಲ್ಲಿ ಗಂಡ ಹೆಂಡತಿ ಒಟ್ತಿಗಿರೋದೇ ಕಷ್ಟ. ಅಂಡರ್ ಸ್ಟ್ಯಾಂಡಿಂಗ್ ಇಲ್ಲದೇ ಅದೆಷ್ಟೋ ಮ್ಯಾರೇಜ್ ಗಳು ಮುರಿದು ಬಿದ್ದಿವೆ. ಅಂತದ್ರಲ್ಲಿ ಈ ಆಸಾಮಿ ೬ ಹೆಂಡ್ತಿಯರ ಜೊತೆ ಮಲಗಲು ದೊಡ್ಡ ಬೆಡ್ ಕಸ್ಟ್ ಮೈಸ್ ಮಾಡಿಸಿದ್ದಾನೆ.
6 ಹೆಂಡತಿಯರ ಜೊತೆ ಮಲಗಲು 20 ಅಡಿ ಅಗಲ 7 ಅಡಿ ಉದ್ದದ ಬೆಡ್ ನ್ನ ರೆಡಿ ಮಾಡಿಸಿದ್ದಾನೆ. ಈ ಸ್ಪೆಷಲ್ ಬೆಡ್ ಗಾಗಿ ಬರೋಬ್ಬರಿ 80 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಹೆಂಡ್ತಿಯರಿಗೆ 80 ಲಕ್ಷ ಖರ್ಚು ಮಾಡಿರೋ ಈ ಭೂಪನ ಹೆಸರು ಅರ್ಥುರ್. ಮೂಲತಹ ಬ್ರೆಜಿಲ್ ದೇಶದವನು. ವೃತ್ತಿಯಲ್ಲಿ ಬಾಡಿ ಬಿಲ್ಡರ್. ಕೇವಲ್ ಬೆಡ್ ಗಾಗಿ ಮಾತ್ರವಲ್ಲ ಈತ ಈ ಹಿಂದೆಯೂ ಸುದ್ದಿಯಲ್ಲಿದ್ದ. ಅದೆನಪ್ಪಾ ಅಂದ್ರೆ ಈ ಹಿಂದೆ 9 ಹೆಂಡ್ತಿರ ಮುದ್ದಿನ ಗಂಡ ಎಂದು ಸಖತ್ ಸುದ್ದಿಯಾಗಿದ್ದ. ಹೌದು ಈತನಿಗೆ ಬರೋಬ್ಬರಿ 9 ಜನ ಹೆಂಡ್ತಿಯರು ಇದ್ದರು. ಆದರೆ ಅದರಲ್ಲಿ 4 ಜನ ಅರ್ಥುಲ್ ಗೆ ಡಿವೋರ್ಸ್ ಕೊಟ್ಟಿ ಟಾ ಟಾ ಬೈ ಬೈ ಹೇಳಿದ್ದಾರೆ.
ಅಸಲಿಗೆ 6 ಹೆಂಡತಿಯ ಜೊತೆ ಸಮಯ ಕಳೆಯಲು ಹಾಗೂ ಪತ್ನಿಯರ ಜೊತೆ ಸಂಬಧ ಸರಿಯಾಗಲು ದೊಡ್ಡ ಬೆಡ್ ಖರಿದಿಸಿದ್ನಂತೆ. ದೊಡ್ಡ ಬೆಡ್ ನಲ್ಲಿ ಕೂತು ಮಾತನಾಡುತ್ತ, ಟಿವಿ ನೋಡುತ್ತ ಸಮಯ ಕಳೆಯುತ್ತಾರಂತೆ. ಈ ದೊಡ್ಡ ಬೆಡ್ ನ್ನ 122 ಜನ 80 ಲಕ್ಷ ರೂಪಾಯಿ ವೆಚ್ಚದಲ್ಲಿ ರೆಡಿ ಮಾಡಿದ್ದಾರೆ. ಇದೀಗ ಸಂಸಾರ ತುಂಬಾ ಚೆನ್ನಾಗಿ ಇದೆ ಎಂದು ಅರ್ಥುರ್ ಹೇಳಿಕೊಂಡಿದ್ದಾರೆ.