Kornersite

Bengaluru Just In Karnataka Politics State

Karnataka Assembly Election: ಸೋನಿಯಾ ಗಾಂಧಿ ಏನು ವಿಷ ಕನ್ಯೆನಾ?

Koppal : ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದೆ. ಹೀಗಾಗಿ ಆರೋಪ- ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ಈಗ ಈ ಅಖಾಡಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು (Narendra Modi) ನಾಗರಹಾವಿಗೆ ಹೋಲಿಸಿದ್ದಾರೆ. ಹಾಗಾದರೆ, ಸೋನಿಯಾ ಗಾಂಧಿ (Sonia Gandhi) ವಿಷಕನ್ಯೆನಾ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಕೇಳಿದ್ದಾರೆ.

ಮೋದಿ ವಿಷದ ಹಾವು ಎಂಬ ಖರ್ಗೆಯವರ (Mallikarjun Kharge) ಹೇಳಿಕೆ ಕುರಿತಾಗಿ ಕೊಪ್ಪಳದ (Koppal) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾಂಗ್ರೆಸ್ (Congress) ಅಧ್ಯಕ್ಷರಾಗಿ ದೇಶದ ಪ್ರಧಾನಿಯನ್ನು ಹೇಗೆ ಮಾತನಾಡಿಸಬೇಕು ಎಂಬುವುದು ತಿಳಿದಿಲ್ಲ. ಇವತ್ತು ಮೋದಿ ಅವರನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ಅಮೆರಿಕಾ (America) ಒಂದು ಕಾಲದಲ್ಲಿ ಭಾರತೀಯರಿಗೆ ವೀಸಾ ಕೊಡುತ್ತಿರಲಿಲ್ಲ. ಆದರೆ ಇವತ್ತು ನಮ್ಮ ಪ್ರಧಾನ ಮಂತ್ರಿ ಅವರನ್ನು ಕೆಂಪು ಹಾಸಿಗೆ ಮೂಲಕ ಸ್ವಾಗತ ಮಾಡಿ ಹೆಗಲ ಮೇಲೆ ಕೈ ಹಾಕಿಕೊಂಡು ಹೋಗುವಂತಹ ವಿಶ್ವ ನಾಯಕರಾಗಿದ್ದಾರೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ (Rahul Gandhi) ಬಂದಲ್ಲೆಲ್ಲಾ ಕಾಂಗ್ರೆಸ್ ಸೋಲು ಕಾಣುತ್ತಿತ್ತು. ರಾಹುಲ್ ಗಾಂಧಿ ವಿಜಯಪುರಕ್ಕೆ ಬಂದ ದಿನವೇ ನಾನು ಗೆದ್ದಿದ್ದೇನೆ. ಅವರೇ ನಮ್ಮ ಸ್ಟಾರ್ ಪ್ರಚಾರಕರು. ಬಾಬಾ ಸಾಹೆಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಅವರ ಶವ ಸಂಸ್ಕಾರಕ್ಕೆ ಜಾಗ ಕೊಡದೆ ಕಾಂಗ್ರೆಸ್ ತಮ್ಮ ಕುಟುಂಬದವರಿಗೆ ಸಮಾಧಿ ಕಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌ ನಲ್ಲಿ ರಾಹುಲ್ ಗಾಂಧಿ ಅಬ್ನಾರ್ಮಲ್. ಆದರೆ, ಇಲ್ಲಿ ಟಿಕ್ಕ ರಾಯರೆಡ್ಡಿ ಹುಚ್ಚ. ಅವರು ನಮ್ಮ ಸಮಾಜಕ್ಕೆ ಸಿಗುವ ಮೀಸಲಾತಿಯನ್ನು ವಿರೋಧ ಮಾಡಿದ್ದಾರೆ. ಅದಕ್ಕಾಗಿ ನಾವು ಅವರನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ. ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡರೆ ಮಕ್ಕಳಾಗುವುದಿಲ್ಲ ಅಂತಾ ಹೇಳಿದ್ದರು. ಆದರೆ, ಮೊದಲು ಹೋಗಿ ಹಾಕಿಸಿಕೊಂಡವರು ಕಾಂಗ್ರೆಸ್ ನವರು. ನಾವು ಹಿಂದೂ-ಮುಸ್ಲಿಂ ಎಂದು ದ್ವೇಷ ಮಾಡಿಲ್ಲ. ಆದ್ದರಿಂದ ಪಾಕಿಸ್ತಾನಕ್ಕೂ ವ್ಯಾಕ್ಸಿನ್ ಕೊಟ್ಟಿದ್ದೇವೆ.

ಕರ್ನಾಟಕದಲ್ಲಿ ಬಿಜೆಪಿ 130 ಸೀಟ್ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರು (Siddaramaiah) ಲಿಂಗಾಯತರು ಭ್ರಷ್ಟರು ಎಂದು ಹೇಳಿದ್ದಾರೆ. ಹಾಗಾದರೆ ಇಡೀ ಸಮುದಾಯವೇ ಭ್ರಷ್ಟರಾ? ಎಲ್ಲಾ ಸಮುದಾಯದ ಮೀಸಲಾತಿಗೆ ಹೋರಾಡಿದ ವ್ಯಕ್ತಿ ನಾನು. ಒಂದು ಸಮುದಾಯದಿಂದ ಆರಂಭವಾದ ಹೋರಾಟಕ್ಕೆ ಎಲ್ಲ ಸಮುದಾಯಕ್ಕೂ ಮೀಸಲಾತಿ ನೀಡಿದ್ದು ಬಿಜೆಪಿ (BJP) ಸರ್ಕಾರ. ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಈ ಸಮುದಾಯದ ಮೀಸಲಾತಿಯನ್ನು ರದ್ದು ಮಾಡುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ. ಧಮ್ ಇದ್ದರೆ, ಲಿಂಗಾಯತ ಸಿಎಂ ಎಂದು ಘೋಷಣೆ ಮಾಡಿ ಎಂದು ಸವಾಲು ಹಾಕಿದ್ದಾರೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು