NewDelhi : ಕಳೆದ 3 ವರ್ಷಗಳಲ್ಲಿ ಅರೇಂಜ್ಡ್ ಮ್ಯಾರೇಜ್ ಆಗುವವರ ಸಂಖ್ಯೆಯಲ್ಲಿ ಶೇ. 24ರಷ್ಟು ಇಳಿಕೆಯಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.
2020ರಲ್ಲಿ ಶೇ. 68ರಷ್ಟು ಜನರು ನಿಶ್ಚಯಿಸಿದ ವಿವಾಹ (ಅರೇಂಜ್ಡ್ ಮ್ಯಾರೇಜ್) ಆಗಿದ್ದರೆ, 2023ರಲ್ಲಿ ಅದು ಶೇ. 44ಕ್ಕೆ ತಲುಪಿದೆ. ಕಳೆದ 3 ವರ್ಷಗಳಲ್ಲಿ ಅರೇಂಜ್ಡ್ ಮ್ಯಾರೇಜ್ ಆಗುವವರ ಸಂಖ್ಯೆಯಲ್ಲಿ ಶೇ. 24ನಷ್ಟು ಇಳಿಕೆಯಾಗಿದೆ ಎಂದು ಅಂಕಿ – ಅಂಶ ಹೇಳಿದೆ.
ಅರೇಂಜ್ಡ್ ಮ್ಯಾರೇಜ್ ನಲ್ಲಿ ವಧು-ವರರು ಒಬ್ಬರಿಗೊಬ್ಬರು ಮೊದಲೇ ತಿಳಿದಿರುವುದಿಲ್ಲ. ಕುಟುಂಬದವರು ನಿಶ್ಚಯಿಸಿದವರನ್ನು ಮದುವೆಯಾಗುತ್ತಾರೆ. ಆದರೆ ಕೆಲವು ವರ್ಷಗಳಿಂದ ಪ್ರೇಮ ವಿವಾಹದ ಟ್ರೆಂಡ್ ಹೆಚ್ಚಾಗಿದೆ. ಹುಡುಗ-ಹುಡುಗಿ ಪರಸ್ಪರ ಮೆಚ್ಚಿ ಮದುವೆಯಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೆಸಾಮಾನ್ಯವಾಗುತ್ತಿದೆ.