Bangalore : ಚಿನಿವಾರು ಮಾರುಕಟ್ಟೆಯಲ್ಲಿ ನಾಗಾಲೋಟ ಮುಂದುವರೆಸಿದ್ದ ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಚೇತರಿಕೆ ಕಂಡು ಬಂದಿದೆ. ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಕೆ ಅಥವಾ ಇಳಿಕೆ ಆಗಿಲ್ಲ. ವಿದೇಶದ ಮಾರುಕಟ್ಟೆಯಲ್ಲಿ ಮಿಶ್ರ ಓಟ ಆಗಿದೆ. ಕೆಲ ಚಿನಿವಾರ ಮಾರುಕಟ್ಟೆಗಳಲ್ಲಿ (Bullion Market) ಯಥಾಸ್ಥಿತಿ ಇದೆ.
ದೇಶದಲ್ಲಿ 10 ಗ್ರಾಂ ಚಿನ್ನದ ಬೆಲೆ (22 ಕ್ಯಾರಟ್) 56,000 ರೂ. ಸಮೀಪವಿದೆ. ಸದ್ಯ 10 ಗ್ರಾಂ ನ 22 ಕ್ಯಾರಟ್ ಚಿನ್ನದ ಬೆಲೆ 55,950 ರುಪಾಯಿ ಆಗಿದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 61,040 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,650 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 56,000 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 8,020 ರೂ. ಇದೆ.
ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 28ಕ್ಕೆ):
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 55,950 ರೂ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 61,040 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,850 ರಿಂಗಿಟ್ (52,345 ರುಪಾಯಿ)
ದುಬೈ: 2240 ಡಿರಾಮ್ (49,891 ರುಪಾಯಿ)
ಅಮೆರಿಕ: 615 ಡಾಲರ್ (50,226 ರುಪಾಯಿ)
ಸಿಂಗಾಪುರ: 829 ಸಿಂಗಾಪುರ್ ಡಾಲರ್ (50,707 ರುಪಾಯಿ)
ಕತಾರ್: 2,305 ಕತಾರಿ ರಿಯಾಲ್ (51,775 ರೂ)
ಓಮನ್: 244 ಒಮಾನಿ ರಿಯಾಲ್ (51,830 ರುಪಾಯಿ)
ಕುವೇತ್: 190 ಕುವೇತಿ ದಿನಾರ್ (50,733 ರುಪಾಯಿ)