Indore : ಪತಿ- ಪತ್ನಿ ಅಂದ ಮೇಲೆ ಕೆಲವೊಂದಿಷ್ಟು ಭಿನ್ನಾಭಿಪ್ರಾಯಗಳು ಸಹಯ. ಆದರೆ, ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಮುನಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಹೀಗೆ ಮಹಿಳೆಯೊಬ್ಬರು ಪತಿಯ ಒಂದೇ ಮಾತಿಗೆ ಮುನಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿರುವುದು ವರದಿಯಾಗಿದೆ.

ರೀನಾ ಯಾದವ್ (34) ಈ ರೀತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಬಲರಾಮ್ ರೀನಾ ಯಾದವ್ ಎಂಬ ಮಹಿಳೆ ಜೊತೆ 15 ವರ್ಷದ ಹಿಂದೆ ಮದುವೆಯಾಗಿದ್ದರು. ಇತ್ತೀಚೆಗೆ ಪತ್ನಿಗೆ ಪತಿ ಬಲರಾಮ್ ತನ್ನ ಪತ್ನಿ ರೀನಾ ಅವರಿಗೆ ಬ್ಯೂಟಿ ಪಾರ್ಲರ್ ಹೋಗುವುದನ್ನು ನಿಲ್ಲಿಸು ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಸಿಟ್ಟಾಗಿದ್ದ ಪತ್ನಿ ರೀನಾ ಯಾದವ್ ಫ್ಯಾನಿಗೆ ಕೊರಳೊಡ್ಡಿ ನೇಣಿಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ತೆಗೆದುಕೊಂಡು ಹೋಗಿದ್ದಾರೆ.