Bangalore : ಚಿನಿ ಮಾರುಕಟ್ಟೆಯಲ್ಲಿ ತುಗೂಯ್ಯಾಲೆ ಮುಂದುವರೆಸಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ.
ಹಲವು ದಿನಗಳ ಕಾಲ ಭರ್ಜರಿಯಾಗಿ ಓಡಿದ್ದ ಚಿನ್ನದ ಬೆಲೆ ಎರಡು ದಿನಗಳಿಂದ ಶಾಂತಗೊಂಡಿದೆ. ಭಾರತ ಹಾಗೂ ವಿದೇಶಗಳ ಚಿನಿವಾರ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ತುಸು ಅಗ್ಗಗೊಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 55,750 ರೂ. ಆಗಿದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 60,820 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,620 ರೂ. ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,800 ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 8 ಸಾವಿರ ರೂ. ಇದೆ.

ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 29ಕ್ಕೆ):
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 55,750 ರೂ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 60,820 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 762 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,840 ರಿಂಗಿಟ್ (52,127 ರೂ.)
ದುಬೈ: 2225 ಡಿರಾಮ್ (49,587 ರೂ.)
ಅಮೆರಿಕ: 615 ಡಾಲರ್ (50,226 ರೂ.)
ಸಿಂಗಾಪುರ: 826 ಸಿಂಗಾಪುರ್ ಡಾಲರ್ (50,568 ರೂ.)
ಕತಾರ್: 2,285 ಕತಾರಿ ರಿಯಾಲ್ (51,358 ರೂ.)
ಓಮನ್: 242.50 ಒಮಾನಿ ರಿಯಾಲ್ (51,539 ರೂ.)
ಕುವೇತ್: 190 ಕುವೇತಿ ದಿನಾರ್ (50,733 ರೂ.)