Kornersite

Bengaluru Just In Karnataka Politics State

Karnataka Assembly Election: ಜಾತಿ, ಧರ್ಮ ವಿಭಜನೆಯಿಂದ ಬಿಜೆಪಿಗೆ ಮಾತ್ರ ಲಾಭ, ಜನರಿಗಲ್ಲ; ಪ್ರಿಯಾಂಕಾ

Karwar : ಜಾತಿ ಹಾಗೂ ಧರ್ಮ ವಿಭಜನೆಯಿಂದ ಬಿಜೆಪಿಗೆ (BJP) ಲಾಭವಾಗಲಿದೆಯೇ ಹೊರತು, ಜನರಿಗೆ ಅಲ್ಲ ಎಂದು ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ( Priyanka Gandhi) ಆರೋಪಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ DFA ಗ್ರೌಂಡ್‌ ನಲ್ಲಿ ಹಳಿಯಾಳ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ. ದೇಶಪಾಂಡೆ ಪರ ನಡೆದ ಪ್ರಚಾರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ 40% ಸರ್ಕಾರ, ಅದು 2.5 ಲಕ್ಷ ಕೋಟಿ ರೂ. ಹಣ ಲೂಟಿ ಮಾಡಿದೆ. ಎಲ್ಲೆಲ್ಲಿ ಸಿಗುತ್ತದೋ ಅಲ್ಲೆಲ್ಲ ಲೂಟಿ ಮಾಡುತ್ತಿದೆ. ಪ್ರಧಾನಿಯವರು ಹುಲಿ ನೋಡಲು ಇಲ್ಲಿಗೆ ಬರುತ್ತಾರೆ. ಚುನಾವಣೆ ಪ್ರಚಾರಕ್ಕೆ ಇಲ್ಲಿಗೆ ಬರುತ್ತಾರೆ. ಆದರೆ ಜನರ ಸಮಸ್ಯೆ ಕೇಳಲು ಇಲ್ಲಿಗೆ ಬರುವುದಿಲ್ಲ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಲೂಟ್, ಲಾಲಜ್, ಅಧಿಕಾರದ ಸರ್ಕಾರವಿದೆ. ಇದನ್ನು ಸರಿ ಪಡಿಸಲು ಜನ ಒಟ್ಟಾಗಬೇಕು. ಎಲ್ಲೆಲ್ಲಿ ಸಿಗುತ್ತದೋ ಅಲ್ಲೆಲ್ಲಾ ಲೂಟಿ ಮಾಡುತ್ತಿದ್ದಾರೆ. ಈ ಹಣ ಸಾರ್ವಜನಿಕರದ್ದು, ಇದನ್ನು ಸರಿಪಡಿಸಲು ಜನ ಒಟ್ಟಾಗಬೇಕು. ಎದು ವಾಗ್ದಾಳಿ ನಡೆಸಿದ್ದಾರೆ.

ನಾವು ಭ್ರಷ್ಟಾಚಾರ, ಲೂಟಿಯನ್ನು ಬಹಿರಂಗವಾಗೇ ಮಾಡುತ್ತೇವೆ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ. ಬಿಜೆಪಿ ಲೂಟಿ ಮಾಡಿದ ಹಣದಿಂದ ಉತ್ತಮ ರಸ್ತೆ, ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು ನಿರ್ಮಾಣ ಮಾಡಬಹುದಿತ್ತು. ಬಿಜೆಪಿ ಸರ್ಕಾರ ಮಹಿಳೆಯರಿಗಾಗಿ 24 ಯೋಜನೆಗಳ ಆಶ್ವಾಸನೆ ನೀಡಿ 2 ಯೋಜನೆ ಮಾತ್ರ ಈಡೇರಿಸಿದ್ದಾರೆ. ಯುವಕರಿಗೆ ಉದ್ಯೋಗ ಕೂಡ ಸಿಗುತ್ತಿಲ್ಲ. 2 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಆರೋಪಿಸಿದ್ದಾರೆ.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು