Mysore : ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಭಾನುವಾರ ಹಳೇ ಮೈಸೂರು (Old Mysuru) ಭಾಗದ ನಾಲ್ಕು ಜಿಲ್ಲೆಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

ಅಮಿತ್ ಶಾ (Amitshah) ಅವರು ಮೈಸೂರಿಗೆ ಬಂದು ಹೋದ ನಂತರ ಪ್ರಧಾನಿ ಮೋದಿ ಅವರು ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇಂದು ಸಂಜೆ ಸಾಂಸ್ಕೃತಿಕ ನಗರಿಯಲ್ಲಿ ರೋಡ್ ಶೋ ನಡೆಯಲಿದ್ದು, ಮೈಸೂರು ಕರ್ನಾಟಕ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ಮತ ಯಾಚನೆ ನಡೆಸಲಿದ್ದಾರೆ. ಜೆಡಿಎಸ್ (JDS) ಭದ್ರ ಕೋಟೆಗಳಲ್ಲಿ ನಮೋ ಭರ್ಜರಿ ಕ್ಯಾಂಪೇನ್ ಮಾಡಲಿದ್ದು, ಜೆಡಿಎಸ್ ಕೋಟೆಗಳಲ್ಲಿ ಬಿಜೆಪಿ ಮತಕೀಳಲು ಮೋದಿ (Narendra Modi) ರಣತಂತ್ರ ನಡೆಸಲಿದ್ದಾರೆ.

ಪ್ರಾಭಲ್ಯ ಕಡಿಮೆ ಇರುವ ಪ್ರದೇಶಗಳಲ್ಲಿ ಗೆಲ್ಲುವುದಕ್ಕಾಗಿ ಬಿಜೆಪಿಯು (BJP) ತಂತ್ರ ನಡೆಸಿದ್ದು, ಓಲ್ಡ್ ಮೈಸೂರಿನಲ್ಲಿ ಸದ್ಯ ಬಿಜೆಪಿ ಬಲ 11 ಕ್ಷೇತ್ರ ಮಾತ್ರ ಆಗಿದೆ. ಈ ಬಾರಿ ಟಾರ್ಗೆಟ್ 25ನ್ನು ಇಟ್ಟುಕೊಂಡು ಬಿಜೆಪಿಯಿಂದ ನಾನಾ ತಂತ್ರಗಾರಿಕೆ ನಡೆಯುತ್ತಿದೆ.. ಚುನಾವಣೆ ಸಮೀಪ ಬಂದಾಗ ಮೈಸೂರು ಕರ್ನಾಟಕ ಅಖಾಡಗಳಲ್ಲಿ ಮೋದಿಯೇ ಬಿಜೆಪಿ ಟ್ರೆಂಡ್ ಚೇಂಜರ್ ಮಾಡಲಿದ್ದಾರೆ. ಹೀಗಾಗಿಯೇ ಅವರು ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಕಣ್ಣು ನೆಟ್ಟಿದ್ದಾರೆ.