Ramanagar : ಮತದಾರರು ಜೆಡಿಎಸ್ಗೆ (JDS) ಮತ ನೀಡಿದರೆ ಅದು ಕಾಂಗ್ರೆಸ್ನ (Congress) ಖಾತೆಗೆ ಹೋಗುತ್ತದೆ. ಕರ್ನಾಟಕದಲ್ಲಿ (Karnataka) ಅಸ್ಥಿರ ಸರ್ಕಾರ ಆಗಲಿದೆ. ಇದರಿಂದ ಅಭಿವೃದ್ಧಿ ಅಸಾಧ್ಯ. ಹೀಗಾಗಿ ಬಿಜೆಪಿಗೆ ಮತ ನೀಡಿ ದು ಪ್ರಧಾನಿ ನರೇಂದ್ರ ಮೋದಿ (Narendra Modi) ಮನವಿ ಮಾಡಿದ್ದಾರೆ.
ಚನ್ನಪಟ್ಟಣದಲ್ಲಿ ನಡೆದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಸ್ಥಿರ ಸರ್ಕಾರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರಣವಾಗಿದೆ. ಹೊರಗಿನ ನೋಟಕ್ಕಷ್ಟೇ ಎರಡು, ಒಳಗಡೆ ಎರಡೂ ಒಂದೇ ಆಗಿದೆ. ಎರಡೂ ಪಕ್ಷಗಳು ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತವೆ. ಜೆಡಿಎಸ್ ಅಂತೂ 15-20 ಸೀಟ್ ಸಿಕ್ಕರೂ ಕಿಂಗ್ ಮೇಕರ್ ಆಗುತ್ತೇವೆ ಎಂಬ ಕನಸು ಕಾಣುತ್ತದೆ. ಜೆಡಿಎಸ್ ಗೆದ್ದರೆ ಒಂದೇ ಕುಟುಂಬ ಉದ್ಧಾರ ಆಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ದೃಶ್ಯದಲ್ಲಿ ಕರ್ನಾಟಕ ಕೇವಲ ಎಟಿಎಂ ಸರ್ಕಾರಗಳಾಗಿವೆ. ಆದರೆ ಬಿಜೆಪಿಗೆ ದೇಶದ ವಿಕಾಸದ ಮಹತ್ವಪೂರ್ಣ ಅಭಿವೃದ್ಧಿಯ ಎಂಜಿನ್ ಆಗಿದೆ. ಕಾಂಗ್ರೆಸ್ ಬಂದರೆ ಕೆಲವರ ವಿಶೇಷ ಕುಟುಂಬಕ್ಕೆ ಮಾತ್ರ ಅನುಕೂಲ ಆಗಲಿದೆ. ಆದರೆ ಬಿಜೆಪಿಯಿಂದ ಎಲ್ಲರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.
ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರದಿಂದ. ರೇಷ್ಮೆ ರೈತರಿಗೆ ಪ್ರತಿ ಟನ್ಗೆ 10 ಸಾವಿರ ರೂ. ಸಹಾಯ ಕೊಡುತ್ತದೆ. ಇದರಿಂದ ಆದಾಯ ಹೆಚ್ಚಳವಾಗಿದೆ. ಬಿಜೆಪಿ ಪ್ರಯತ್ನದಿಂದಾಗಿ ರೇಷ್ಮೆಯ ರಫ್ತು ಹೆಚ್ಚಾಗಿದೆ. ಕಾಂಗ್ರೆಸ್ನ ಗ್ಯಾರಂಟಿ, ಸುಳ್ಳಿನ ವಾರಂಟಿ ಆಗಿದೆ. ಹಿಮಾಚಲ ಪ್ರದೇಶದಲ್ಲಿ ಮನೆಯ ಪ್ರತಿ ಮಹಿಳೆಯರಿಗೆ 1 ಸಾವಿರ ರೂ. ಕೊಡುತ್ತೇವೆ ಎಂದಿದ್ದರು. ಆದರೆ ಯೋಜನೆ ಇವತ್ತಿನ ವರೆಗೂ ಜಾರಿಯಾಗಿಲ್ಲ ಎಂದು ಕಿಡಿಕಾರಿದರು.